ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾದ ಕರೆನ್ಸಿಯಲ್ಲಿ ಬಳಸ್ತಾರೆ ಗಣಪತಿ ಫೊಟೋ! ಅಚ್ಚರಿಯಾದರೂ ಸತ್ಯ!!

ಮಂಗಳೂರು: ಜಗತ್ತಿನ ಅತೀ ದೊಡ್ಡ ಮುಸ್ಲಿಂ ರಾಷ್ಟ್ರವೆಂದರೆ ಅದು ಇಂಡೋನೇಷ್ಯಾ. ಆದರೆ ಇಲ್ಲಿನ ಕರೆನ್ಸಿಯಲ್ಲಿ ಗಣಪತಿ ಚಿತ್ರ ಬಳಸುತ್ತಾರೆ ಎಂದರೆ ಅಚ್ಚರಿಯಲ್ಲದೆ ಇನ್ನೇನು? ಅಷ್ಟಕ್ಕೂ ಭಾರತೀಯರು ಆರಾಧಿಸುವ ಗಣಪತಿ ಚಿತ್ರ ಇಂಡೋನೇಷ್ಯಾದ ಕರೆನ್ಸಿಯಲ್ಲಿ ಏಕೆ ಬಳಸ್ತಾರೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ.
ಇಂಡೋನೇಷ್ಯಾದಲ್ಲಿ ಕರೆನ್ಸಿಗೆ ರುಪಿಯಾ ಎಂದು ಕರೆಯಲಾಗುತ್ತದೆ. ಇಲ್ಲಿನ 20 ಸಾವಿರ ರುಪಿಯಾದಲ್ಲಿ ಗಣಪತಿ ಚಿತ್ರ ಕಾಣಲು ಸಿಗುತ್ತದೆ. ದೇಶದ ಸಂಪತ್ತನ್ನು ಗಣಪತಿ ರಕ್ಷಿಸುತ್ತದೆ ಎನ್ನುವುದು ಇಲ್ಲಿನ ಜನರ ಭಾವನೆ. ಕೆಲವು ವರ್ಷಗಳ ಹಿಂದೆ ಇಲ್ಲಿನ ಆರ್ಥಿಕ ಸ್ಥಿತಿ ಪಾತಾಳ ತಲುಪಿದ್ದು ಆ ಸಂದರ್ಭದಲ್ಲಿ ಅಲ್ಲಿನ ಆರ್ಥಿಕ ತಜ್ಞರು ಸಭೆ ನಡೆಸಿ ಸಮಾಲೋಚನೆ ನಡೆಸುತ್ತಾರೆ. ಬಳಿಕ 20 ಸಾವಿರದ ಹೊಸ ನೋಟು ಹೊರ ತರುತ್ತಾರೆ. ಅದರಲ್ಲಿ ಗಣಪತಿಯ ಚಿತ್ರ ಮುದ್ರಿಸಿದ ಬಳಿಕ ಅಲ್ಲಿನ ಆರ್ಥಿಕ ಸ್ಥಿತಿ ಸರಿಯಾಗಿತ್ತು. ಇದರಿಂದಾಗಿ ಈ ಪದ್ಧತಿಯನ್ನು ಮುಂದುವರಿಸಲಾಗಿದೆ.
20 ಸಾವಿರ ನೋಟುಗಳ ಮುಂದಿನ ಭಾಗದಲ್ಲಿ ಗಣಪತಿಯ ಚಿತ್ರ ಇದ್ದರೆ, ಹಿಂದಿನ ಭಾಗದಲ್ಲಿ ಶಾಲಾ ತರಗತಿಯ ಚಿತ್ರವಿದ್ದು ಅದರಲ್ಲಿ ಮಕ್ಕಳು ಮತ್ತು ಶಿಕ್ಷಕರು ಅಲ್ಲದೆ ದೇಶದ ಪ್ರಥಮ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹರ್ಜ್ ದೇವೇಂದ್ರರ ಚಿತ್ರ ಇದೆ. ಅದಲ್ಲದೆ ಇಲ್ಲಿನ ಜನ ಗಣಪತಿಯನ್ನು ಪೂಜಿಸುವುದೂ ಇದೆ. ಭಾರತದಲ್ಲಿ ರಾಮಾಯಣ, ಮಹಾಭಾರತವನ್ನು ನೋಡಿದ್ದ ಇಂಡೋನೇಷ್ಯಾದ ಜನ ಗಣಪತಿಯನ್ನು ಆರಾಧಿಸಲು ಆರಂಭಿಸಿದ್ದರು. ಇಲ್ಲಿನ ಸೇನೆಯ ಕಚೇರಿಯ ಮುಂಭಾಗದಲ್ಲಿ ಅರ್ಜುನ, ಕೃಷ್ಣ ಮತ್ತು ಘಟೋದ್ಘಜನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ವಿಮಾನ ಸೇವೆಯ ಹೆಸರಾಗಿದೆ ಗರುಡಾ ಸರ್ವೀಸ್! ಒಟ್ಟಿನಲ್ಲಿ ವಿಶ್ವದ ಅತಿದೊಡ್ಡ ಮುಸ್ಲಿಂ ದೇಶ ಎಂದು ಕರೆಸಿಕೊಳ್ಳುವ ಇಂಡೋನೇಷ್ಯಾದ ಆರಾಧನಾ ಪದ್ಧತಿಗಳು ಮಾತ್ರ ಭಾರತೀಯರದ್ದಾಗಿದೆ ಎನ್ನುವುದು ವಿಶೇಷ.