ಮುಂಬಯಿಯಲ್ಲಿ ಕೃಷಿ ಮಾಡಿ ಸುದ್ದಿಯಾದ ಸಂಸದ ಗೋಪಾಲ ಶೆಟ್ಟಿ!

ಮಂಗಳೂರು: ಉತ್ತರ ಮುಂಬಯಿಯ ಬೊರಿವಿಲಿಯ ಕ್ಷೇತ್ರದ ಬಿಜೆಪಿ ಸಂಸದ ಗೋಪಾಲ ಸಿ. ಶೆಟ್ಟಿ ಬಗ್ಗೆ ತಿಳಿಯದವರು ತುಳುನಾಡಿನಲ್ಲೂ ಕಡಿಮೆ. ಅತಿ ಹೆಚ್ಚು ಮತಗಳಿಂದ ಸಂಸತ್ತಿಗೆ ಆಯ್ಕೆಯಾಗುವ ಮೂಲಕ ಸುದ್ದಿಯಾಗಿದ್ದ ಅವರು ಈಗ ಕೃಷಿಯ ಮೂಲಕ ಎಲ್ಲರ ಬಾಯಲ್ಲೂ ಮಾತಾಗಿದ್ದಾರೆ.
ಉಡುಪಿ ಜಿಲ್ಲೆಯ ಸಾಂತೂರು ಮುದರಂಗಡಿ ಮೂಲದ ಇವರು ಮುಂಬಯಿಯಲ್ಲಿ ಉದ್ಯಮಿಯಾಗಿ ಹಾಗೂ ರಾಜಕಾರಣಿಯಾಗಿ ಖ್ಯಾತರು. ಈಗ ಬೊರಿವಿಲಿಯಲ್ಲಿ ಉಳುಮೆ ಮಾಡಿ ಕೃಷಿ ಮಾಡುವ ಮೂಲಕ ದೂರದ ಮುಂಬಯಿಗೆ ಹೋದರೂ, ಗಣ್ಯ ವ್ಯಕ್ತಿಯಾದರೂ ತುಳುನಾಡಿನ ಮೂಲ ಕಸುಬಾಗಿರುವ ಕೃಷಿಯನ್ನು ಮರೆತಿಲ್ಲ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.
ಗೋಪಾಲ ಶೆಟ್ಟಿಯವರು ಮಾತು ಕಡಿಮೆ, ಕೆಲಸ ಹೆಚ್ಚು ಎಂಬಂತಿರುವವರು. ಅವರು ಕೆಲಸಗಳಿಗೆ ಜನರೇ ಮಾತಾಗುತ್ತಿದ್ದಾರೆ. ಈಗ ಅವರು ಎತ್ತುಗಳ ಮೂಲಕ ಉಳುಮೆ ಮಾಡಿ ನಾಟಿ ಮಾಡುವ ದೃಶ್ಯಗಳು ಭಾರೀ ವೈರಲ್ ಆಗುತ್ತಿವೆ.
ಗೋಪಾಲ್ ಶೆಟ್ಟಿ ಒರ್ವ ಆದರ್ಶ ರಾಜಕಾರಣಿ, ಇಚ್ಚಾಶಕ್ತಿ ಹಾಗೂ ದೂರದೃಷ್ಟಿಯ ಜನ ನಾಯಕ ಪ್ರತಿಯೊಂದು ಕೆಲಸವನ್ನೂ ಕ್ರಮಬದ್ಧವಾಗಿ ಮಾಡುವ ಸಂಸದರಾಗಿ ಗಮನ ಸೆಳೆದಿದ್ದಾರೆ.

Leave a Reply

Your email address will not be published. Required fields are marked *