ಮೀನು ವ್ಯಾಪಾರಿಯಿಂದ ಅಪ್ರಾಪ್ತೆಯ ರೇಪ್!

ಮೂಡಬಿದ್ರೆ: ಮೀನು ವ್ಯಾಪಾರಿಯೋರ್ವ ಸ್ಥಳೀಯ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿರುವ ಪ್ರಕರಣ ಮಾರ್ಪಾಡಿಯಲ್ಲಿ ನಡೆದಿದೆ.
ತಮಿಳು ಮೂಲದ ಅಪ್ರಾಪ್ತೆ ತನ್ನ ಪೋಷಕರೊಂದಿಗೆ ಇದೇ ಪರಿಸರದಲ್ಲಿ ವಾಸವಿದ್ದಳು. ಈಕೆಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು ಆರೋಪಿ ಮೀನು ವ್ಯಾಪಾರಿಯಾಗಿದ್ದಾನೆ. ಈತ ಅಪ್ರಾಪ್ತೆಯ ಜೊತೆ ಸಲುಗೆ ಬೆಳೆಸಿದ್ದು ಆಕೆಯನ್ನು ಪುಸಲಾಯಿಸಿ ಹತ್ತಿರದ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾವೆಸಗಿದ್ದಾನೆ.
ಅಪ್ರಾಪ್ತೆ ಮನೆಯಲ್ಲಿ ಮಂಕಾಗಿದ್ದು ಮನೆಮಂದಿ ವಿಚಾರಿಸಿದಾಗ ಅತ್ಯಾಚಾರ ವಿಚಾರ ಮನೆಮಂದಿಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿ ಪೊಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *