ಮಾಸ್ಕ್ ಹಾಕದವರಿಗೆ ಮಾದರಿಯಾದ ಮಾನಸಿಕ ಅಸ್ವಸ್ಥೆ

ಮೂಡಬಿದ್ರೆ: ಕೊರೊನಾ ನಿಯಂತ್ರಿಸುವ ಸಲುವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಎಷ್ಟೇ ಎಚ್ಚರಿಕೆ ನೀಡಿದರೂ ಮಾಸ್ಕ್ ಹಾಕದ ಮಂದಿಗೆ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಹಿಳೆಯೋರ್ವರು ಮಾದರಿಯಾಗಿದ್ದಾರೆ.
ಮೂಡಬಿದ್ರೆ ಬಸ್ ನಿಲ್ದಾಣದಲ್ಲಿ ಕಾಣ ಸಿಕ್ಕ ಈ ಮಹಿಳೆಗೆ ತೀರಾ ಮಾನಸಿಕ ಸಮಸ್ಯೆ ಇದ್ದರೂ ತಾನು ಧರಿಸಿದ ಬಟ್ಟೆಯನ್ನೇ ಮುಖಕ್ಕೆ ಮುಚ್ಚಿಕೊಂಡು ಮಾದರಿಯಾಗಿದ್ದಾರೆ.
ಲೋಕ ಪರಿಜ್ಞಾನ ಇರದೆ ಹಾಡು ಹೇಳುತ್ತಾ, ಕಿರುಚಾಡುತ್ತಾ ಇದ್ದ ಈ ಮಹಿಳೆ ಕೊರೊನಾ ವಿಚಾರದಲ್ಲಿ ಸ್ವಯಂ ಪ್ರೇರಿತ ಎಚ್ಚರಿಕೆ ವಹಿಸಿದ್ದು ವಿಶೇಷ. ಎಲ್ಲವೂ ಸರಿ ಇದ್ದು ಕೊರೊನಾ ಮುಂಜಾಗ್ರತಾ ಕ್ರಮ ಅನುಸರಿಸದ ಬೀದಿ ಸಂಚಾರಿಗಳು ಈ ಮಹಿಳೆಯನ್ನು ನೋಡಿ ಬುದ್ದಿ ಕಲಿಯುವುದು ಸಾಕಷ್ಟಿದೆ.