ಮಾಸ್ಕ್ ಧರಿಸದೆ ಸುತ್ತಾಡಿದ 32 ಮಂದಿಗೆ ತಲಾ ₹100 ದಂಡ

ಕಾರ್ಕಳ: ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ‌ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಬೇಕು ಎನ್ನುವ ನಿಯಮವಿದೆ. ಈ ಬಗ್ಗೆ ವ್ಯಾಪಕ ಜಾಗೃತಿ ಕೈಗೊಳ್ಳಲಾಗುತ್ತಿದೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡವರಿಗೆ ದಂಡ ವಿಧಿಸಲಾಗಿದೆ.

ಹೌದು ಮಾಸ್ಕ್ ಧರಿಸದೆ ಸುತ್ತಾಡುತ್ತಿದ್ದ 32 ಮಂದಿಗೆ ತಲಾ ₹ 100 ರಂತೆ ದಂಡ ವಿಧಿಸಿ ದಿಟ್ಟ ಕ್ರಮ ಕೈಗೊಂಡಿದ್ದಾರೆ ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ.

ಇವರು ಸಾರ್ವಜನಿಕವಾಗಿ ಮಾಸ್ಕ್ ಧರಿಸದೆ ಸುತ್ತಾಡುವುದನ್ನು ಗಮನಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಕೊರೊನಾ ತಗುಲದಂತೆ ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಿದರು

Leave a Reply

Your email address will not be published. Required fields are marked *