ಮಾಲೆಮಾರ್ನಲ್ಲಿ ಕರಾವಳಿ ಫಿಶ್ ಕಾರ್ನರ್ ಉದ್ಘಾಟನೆ

ಮಂಗಳೂರು: ನಗರದ ಕೊಟ್ಟಾರ ಬಳಿಯ ಮಾಲೆಮಾರಿನಲ್ಲಿ ಕರಾವಳಿ ಫಿಶ್ ಕಾರ್ನರ್ ಉದ್ಘಾಟನೆಗೊಂಡಿದೆ. ಉದ್ಘಾಟನಾ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್, ಸತ್ಯಜಿತ್ ಸುರತ್ಕಲ್, ಸತೀಶ್ ಮುಂಚೂರು, ಮಾಜಿ ಮೇಯರ್ ಶಶಿದರ್ ಹೆಗ್ಡೆ ಹಾಗೂ ನಟ ತಮ್ಮಣ್ಣ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಚೇತನ್ ಜೆ. ಶೆಟ್ಟಿ ಹಾಗೂ ಓಂಕಾರ್ ಶೆಟ್ಟಿ ಸಂಸ್ಥೆಯಿಂದ ಉತ್ತಮ ಗುಣಮಟ್ಟದ ಮೀನುಗಳನ್ನು ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.