ಮಹಿಳೆಯರ ಸ್ವಾವಲಂಬನೆಗೆ ಪುಷ್ಪಗಿರಿ ಮಹಾಸಂಸ್ಥಾನ ಯೋಜನೆ

ಹಾಸನ: ಹಳೆಬೀಡಿನ ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹದಾಸೆಯಾಗಿರುವ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡವರ ಮಹಿಳೆಯರ ಸಬಲೀಕರಣ ಮಕ್ಕಳ ಶಿಕ್ಷಣ ಸೇರಿದಂತೆ ಹೊಸ ಹೊಸ ಚಿಂತನೆಯನ್ನು ಮುಂದಿಟ್ಟುಕೊಂಡು ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿದೆ.
ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಹಿಳೆಯರ ಸಬಲೀಕರಣವನ್ನು ಮುಂದಿಟ್ಟುಕೊಂಡು ಸ್ವಸಾಯ ಸಂಘಗಳನ್ನೂ ನಡೆಸಿಕೊಂಡು ಬರುತ್ತಿದ್ದು, ನಿನ್ನೆ ಪೂಜ್ಯ ಡಾ.ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಬೇಲೂರು ತಾಲೂಕಿನ ಚಿಲ್ಕೂರು ಗ್ರಾಮದ ಸ್ವಸಹಾಯ ಸಂಘಕ್ಕೆ ಮಠದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಹತ್ತು ಸಾವಿರ ರೂ.ಗಳ ಚೆಕ್ಕನ್ನು ಪ್ರೋತ್ಸಾಹಧನವಾಗಿ ಮಹಿಳೆಯರಿಗೆ ನೀಡಿದರು.

Leave a Reply

Your email address will not be published. Required fields are marked *