ಮಹಾರಾಷ್ಟ್ರ: ಕೊರೊನಾಕ್ಕೆ 60 ಪೊಲೀಸರ ಬಲಿ! 4900 ಮಂದಿಗೆ ಸೋಂಕು!!

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು 60 ಮಂದಿ ಪೊಲೀಸರ ಬಲಿ ಪಡೆದಿದೆ. 4900ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವ ಮಾಹಿತಿ ಲಭ್ಯವಾಗಿದೆ. ಈವರೆಗೆ ರಾಜ್ಯದಲ್ಲಿ 3700 ಪೊಲೀಸ್ ಅಧಿಕಾರಿಗಳು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮೃತಪಟ್ಟವರಲ್ಲಿ 38 ಮಂದಿ ಮುಂಬೈ ಪೊಲೀಸರು, ಅಲ್ಲದೆ 4900 ಸೋಂಕಿತರಲ್ಲಿ 2600 ಸೋಂಕಿತರು ಮುಂಬೈಯವರಾಗಿದ್ದಾರೆ.
ಲಾಕ್‍ಡೌನ್ ಸಮಯದಲ್ಲಿ ಪೊಲೀಸರು ವಾಹನ ಸವಾರರನ್ನು ತಪಾಸಣೆಗೊಳಪಡಿಸಲು ರಸ್ತೆಗಳಲ್ಲಿ ಕಾರ್ಯನಿರತರಾಗಿದ್ದರು. ಈ ವೇಳೆ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಸೋಂಕು ಬಾಧಿಸಿದೆ ಎಂದು ಹೇಳಲಾಗುತ್ತಿದೆ.
ಸೂಪರ್ ಜಯಕಿರಣ