ಮನೆಮದ್ದು ಸಾವಿಗೆ ಕಾರಣವಾಗಬಹುದು: ಡಾ.ಮುನೀರ್

ಮಂಗಳೂರು: ಕೊರೊನಾ ಸೋಂಕು ಲಕ್ಷಣ ಹೊಂದಿರುವವರು ವೈದ್ಯರ ಸಲಹೆ ಪಡೆಯದೆ ಕೇವಲ ಮನೆಮದ್ದು ಉಪಯೋಗಿಸುವುದರಿಂದ ಅವರ ಸಾವಿಗೆ ಕಾರಣವಾಗಬಹುದು. ಆದ್ದರಿಂದ ಯಾವುದೇ ಸೋಂಕಿನ ಲಕ್ಷಣವಿದ್ದರೂ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ಹಿರಿಯು ವೈದ್ಯರಾದ ಡಾ. ಮುನೀರ್ ಅಹ್ಮದ್ ಕಿವಿಮಾತು ಹೇಳಿದ್ದಾರೆ. ಕೆಲವರು ಜಾಲತಾಣಗಳಲ್ಲಿ ಮುಸ್ಲಿಮರಿಗೆ ಮಾತ್ರ ಪಾಸಿಟಿವ್ ಇದೆ ಎಂದು ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ಆದರೆ ದ.ಕ ಜಿಲ್ಲೆಯಲ್ಲಿ 25 ಸಾವಿರ ಮಂದಿಯ ತಪಾಸಣೆ ನಡೆಸಿದ್ದು ಇದರಲ್ಲಿ 2500 ಮಂದಿಗೆ ಪಾಸಿಟಿವ್ ಕಂಡುಬಂದಿದೆ. ಇದರಲ್ಲಿ ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಇಬ್ಬರು ಮುಸ್ಲಿಂ ವೈದ್ಯರಿಗೆ ಸೋಂಕು ತಗುಲಿದೆ ಎಂದು ಡಾ. ಮುನೀರ್ ಹೇಳಿದ್ದಾರೆ.
ಎರಡು ಮೂರುದಿನಗಳ ಕಾಲ ಜ್ವರ ಬಂದ್ರೆ ನಮ್ಮ ಫ್ಯಾಮಿಲಿ ವೈದ್ಯರಲ್ಲಿಗೆ ಹೋಗಬಹುದು. ಅವರು ನಮ್ಮನ್ನು ಅಡ್ಮಿಟ್ ಆಗಬೇಕೆಂದು ಸೂಚಿಸಿದರೆ ಮಾತ್ರ ಆಸ್ಪತ್ರೆಗಳಿಗೆ ದಾಖಲಾಗಬೇಕು. ವೈದ್ಯರ ಬಳಿ ಸಲಹೆ ಪಡೆಯದೆ ಕೇವಲ ಮನೆಮದ್ದು ಮಾಡಿದರೆ ಸಾವಿಗೂ ಕಾರಣವಾಗಬಹುದು. ಎರಡು ದಿನ ಜ್ವರ ಬಂದು ನಂತರವೂ ಕಡಿಮೆಯಾಗದಿದ್ದರೆ ವೈದ್ಯರ ಬಳಿ ಹೋಗಬೇಕು ಎಂದು ಅವರು ಸಲಹೆ ನೀಡಿದರು. ಕೊರೊನಾ ಸೋಂಕಿತರ ಕಿಡ್ನಿ, ಮುಂತಾದ ಅಂಗಗಳನ್ನು ತೆಗೆಯುತ್ತಿದ್ದಾರೆನ್ನುವ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆದರೆ ಪಾಸಿಟಿವ್ ಇರುವವರ ಯಾವುದೇ ಅಂಗಗಳು ಉಪಯೋಗಕ್ಕೆ ಬರುವುದಿಲ್ಲ. ನಾರ್ಮಲ್ ವ್ಯಕ್ತಿಯ ಕಿಡ್ನಿ ಟ್ರಾನ್ಸ್ ಫರ್ ಮಾಡಲು ಆರು ತಿಂಗಳ ಪ್ರಕ್ರಿಯೆ ಇರುತ್ತದೆ. ಆದ್ದರಿಂದ ಪಾಸಿಟಿವ್ ಇರುವವರ ಅಂಗಾಂಗ ತೆಗೆಯಲು ಸಾಧ್ಯವಿಲ್ಲ. ಇಂಥಾ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *