ಮನಪಾ ಕಾರ್ಪೊರೇಟರ್ ಗೆ ಕೊರೊನಾ ಪಾಸಿಟಿವ್!

ಮಂಗಳೂರು: ಮಹಾನಗರ ಪಾಲಿಕೆ ಕಾರ್ಪೋರೇಟರ್ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಂಗಳೂರು ಪಾಲಿಕೆ ಕುಂಜತ್ತಬೈಲ್ ದಕ್ಷಿಣ 15ನೇ ವಾರ್ಡ್ ಸದಸ್ಯೆ ಸುಮಂಗಲಾ ರಾವ್ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಮಾಹಿತಿ ನೀಡಿದ್ದಾರೆ.
ಸುಮಂಗಲ ಅವರು ಕೆಲದಿನಗಳ ಹಿಂದೆ ಕುಂಜತ್ತಬೈಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಗೆ ಆಗಮಿಸಿದ್ದ ಒಬ್ಬ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ಕಳೆದ ಏಳು ದಿನಗಳಿಂದ ಅವರು ಸ್ವತ: ಕ್ವಾರಂಟೈನ್ ಆಗಿದ್ದರು. ಇಂದು ಬಂದ ವರದಿಯಲ್ಲಿ ಕಾರ್ಪೋರೆಟರ್ ಗೆ ಕೊರೋನಾ ದೃಢಪಟ್ಟಿದೆ. ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.