ಮಗಳ ಮೇಲೆಯೇ ಉಸ್ತಾದ್ ನಿಂದ ಅತ್ಯಾಚಾರ!

ಸುಳ್ಯ: ಗೂನಡ್ಕದ ಮದ್ರಸಾ ಉಸ್ತಾದ್ ಒಬ್ಬ ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಘಟನೆ ಕೇರಳದ ನೀಲೇಶ್ವರ ಎಂಬಲ್ಲಿ ನಡೆದಿದೆ. ಪೆÇಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆಯ ವಿವರ:
ಸುಳ್ಯ ಸಮೀಪದ ಗೂನಡ್ಕ ನಿವಾಸಿ ಉಸ್ತಾದ್ ಕೇರಳದ ಕಾಞಂಗಾಡ್ ಬಳಿಕ ತೈಕಡಪ್ಪುರದಲ್ಲಿ ವಾಸಿಸುತ್ತಿದ್ದು ಅಲ್ಲಿನ ಮದ್ರಸಾದಲ್ಲಿ ಅಧ್ಯಾಪಕನಾಗಿದ್ದ. ಈತ ಗೂನಡ್ಕದಲ್ಲಿ ಒಂದು ಮದುವೆಯಾಗಿದ್ದರೆ ಕಾಞಂಗಾಡ್‍ನಲ್ಲಿ ಮತ್ತೊಂದು ಮದುವೆಯಾಗಿದ್ದಾನೆ. ಈತನ 16 ವರ್ಷದ ಅಪ್ರಾಪ್ತ ಮಗಳು ಗರ್ಭಿಣಿಯಾಗಿದ್ದು ಇದರಿಂದ ಅತ್ಯಾಚಾರ ಸಂಗತಿ ಬಯಲಾಗಿದೆ. ಬಾಲಕಿಯು ತನ್ನ ಮಾವನ ಸಹಾಯದಿಂದ ನೀಲೇಶ್ವರ ಠಾಣೆಗೆ ದೂರು ನೀಡಿದ್ದು ಹಲವು ವರ್ಷಗಳಿಂದ ತಂದೆ ಮತ್ತು ಇತರರು ಅತ್ಯಾಚಾರ ನಡೆಸಿದ್ದಾರೆ ಎಂದಿದ್ದಾಳೆ.
ಬಾಲಕಿ ನೀಡಿದ ದೂರಿನಂತೆ ಪೆÇಲೀಸರು ಉಸ್ತಾದ್ ಹಾಗೂ ಪರಿಸರದ ಮೂವರು ಯುವಕರನ್ನು ಬಂಧಿಸಿದ್ದು ಮಗಳ ಮೇಲೆಯೇ ಅತ್ಯಾಚಾರ ನಡೆಸುತ್ತಿದ್ದ ಬಗ್ಗೆ ತಿಳಿದೂ ಸುಮ್ಮನಿದ್ದ ತಾಯಿಯ ಮೇಲೆ ಕೇಸ್ ದಾಖಲಿಸಲಾಗಿದೆ. ಉಸ್ತಾದ್ ವಿರುದ್ಧ ಈ ಹಿಂದೆಯೂ ವಿವಿಧ ಠಾಣೆಗಳಲ್ಲಿ ಬಾಲಕಿಯರ ಅತ್ಯಾಚಾರಕ್ಕೆ ಸಂಬಂಧಿಸಿ ಪೆÇೀಕ್ಸೋ ಕಾಯ್ದೆಯಡಿ ಪ್ರಕರಣವೂ ಸೇರಿದಂತೆ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು.

5 thoughts on “ಮಗಳ ಮೇಲೆಯೇ ಉಸ್ತಾದ್ ನಿಂದ ಅತ್ಯಾಚಾರ!

  1. ಅಂತಹ ಗುರುವಿನಿಂದ ಎಂಥಹ ಸಮಾಜದ ಕನಸು ಕಾಣ ಬಹುದು… ? ಇಂಥಹ ದೂರ್ಥರನ್ನ ಪಬ್ಲಿಕ್ನಲ್ಲಿ ನೇನಿಗೇರಿಸ ಬೇಕು…

    1. ಇಸ್ಲಾಮಿಕ್ ಕಾನೂನು ಪ್ರಕಾರ ಸಾರ್ವಜನಿಕ ವಾಗಿ ಕಲ್ಲೆಸೆದು ಕೊಲ್ಲಬೇಕುsha

    2. ಹೌದು

      ನೀಚ ಇಂತಹ ಗುರುವಿನಿಂದ ಸಮುದಾಯ ಉದ್ದಾರ ಆಗುವುದಿಲ್ಲ

  2. ಛೀ…..ತಂದೆ ಎಂಬ ಪದಕ್ಕೇ ಅವಮಾನ…..ತಂದೆ ಅಲ್ಲ ಆತ ರಾಕ್ಷಸ…

Leave a Reply

Your email address will not be published. Required fields are marked *