ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಕಸಾಯಿಖಾನೆಗೆ ತೀವ್ರ ವಿರೋಧ!

ಮಂಜೇಶ್ವರ: ಪಂಚಾಯತ್‍ನ 11ನೇ ವಾರ್ಡಲ್ಲಿ ಕಸಾಯಿಖಾನೆಯೊಂದು ತೆರೆಯಲು ಸಜ್ಜಾಗಿದೆ. ಇದಕ್ಕೆ ಪಂಚಾಯತ್‍ನವರಾಗಲೀ ಆರೋಗ್ಯ ಇಲಾಖೆಯ ಅಧಿಕಾರಿಯವರಾಗಲೀ ಯಾವುದೇ ಅನುಮತಿಯನ್ನು ಕೊಟ್ಟಿಲ್ಲ ಎಂದು ತಿಳಿದುಬಂದಿದೆ. ವಿಶ್ವಹಿಂದೂ ಪರಿಷತ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಈಗಾಗಲೇ ಪಂಚಾಯತ್ ಮತ್ತು ಆರೋಗ್ಯ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ. ಈ ಕಸಾಯಿಖಾನೆ ಎದುರಿಗೆ ಕಮ್ಯುನಿಸ್ಟ್ ಪಕ್ಷದ ನೇತಾರರ ಮನೆಯಿದ್ದು ಅವರು ಮೌನವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಸಾಯಿಖಾನೆ ಪಕ್ಕದಲ್ಲೇ ಕನಿಲ ಭಗವತೀ ಕ್ಷೇತ್ರವಿದೆ. ಇದು ಹಿಂದೂ ಆರಾಧನಾಲಯದ ಪಾವಿತ್ರ್ಯತೆಗೆ ಧಕ್ಕೆ ತರುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂದೂ ಸಂಸ್ಕೃತಿಯ ಪ್ರಕಾರ ಗೋಮಾತೆಗೆ ವಿಶೇಷ ಸ್ಥಾನವಿದ್ದು ಭಕ್ತರ ಭಾವನೆಗೆ ಧಕ್ಕೆಯುಂಟು ಮಾಡುವ ಇಂಥ ನಿರ್ಧಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *