ಮಂಗಳೂರು: ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಪರಾರಿ, ಪತ್ತೆಗಾಗಿ ಮ‌ನವಿ

ಮಂಗಳೂರು: ಕೊರೊನಾ ಸೋಂಕಿತನೋರ್ವ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಇಂದು ನಡೆದಿದ್ದು, ಈತನ ಪತ್ತೆಗಾಗಿ ಪೊಲೀಸರು ಮನವಿ ಮಾಡಿದ್ದಾರೆ.

ಸ್ವಇಚ್ಛೆಯಿಂದ ಜುಲೈ 1ರಂದು ಕೋವಿಡ್ 19 ರೋಗ ಲಕ್ಷಣಗಳು ಇದೆ ಎಂಬ ಕಾರಣ ಆಸ್ಪತ್ರೆಗೆ ಬಂದ ವ್ಯಕ್ತಿಯನ್ನು ವಾರ್ಡ್ ಒಂದರಲ್ಲಿ ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಇಂದು ಈತನಿಗೆ ಕೋವಿಡ್ 19 ದೃಢ ಪಟ್ಟಿದೆ‌.

ನಂತರ ಸುಮಾರು 4 ಗಂಟೆಯ ಸಮಯ ವೆನ್ ಲಾಕ್ ಆಸ್ಪತ್ರೆಯ ಕೋವಿಡ್ ಬ್ಲಾಕ್ ನಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಈತನ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ‌.

ಈತನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದರೆ ಮತ್ತು ಎಲ್ಲಿಯಾದರೂ ಕಂಡು ಬಂದರೆ ನಗರ ಪೊಲೀಸ್ ಕಂಟ್ರೋಲ್ ನಂಬರ್ 9480802300 ಹಾಗೂ ಪಾಂಡೇಶ್ವರ ಪೊಲೀಸ್ ಠಾಣಾ 0824 2220530 ಈ ನಂಬರ್ ಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪಿತ ಮೂಲತಃ ಪುತ್ತೂರು, ದರ್ಬೆ ನಿವಾಸಿಯಾಗಿದ್ದು ಈತ ಮಂಗಳೂರಿನ ಅಜ್ಜಿ ಮನೆಯಲ್ಲಿ ವಾಸ್ತವ್ಯ ಹೊಂದಿದ್ದ. ಈತ ಹೆಸರು ದೇವರಾಜು(18) ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *