ಮಂಗಳೂರಿನಲ್ಲಿ ಜು.8ರಿಂದ ಯಾವುದೇ ಲಾಕ್ಡೌನ್ ಇಲ್ಲ!

ಮಂಗಳೂರು: ಇಂದು ಬೆಳಗ್ಗಿನಿಂದ ದ.ಕ. ಜಿಲ್ಲೆಯಲ್ಲಿ ಜು.8ರಿಂದ 25ರವರೆಗೆ ಸ್ವಯಂಪ್ರೇರಿತ ಲಾಕ್ಡೌನ್ ಇರಲಿದೆ ಎಂಬ ಮೆಸೇಜ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಆದರೆ ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾಪ ಇರುವುದಿಲ್ಲ, ಇದೊಂದು ಸುಳ್ಳು ಸಂದೇಶ ಎಂದು ಹೇಳಲಾಗಿದೆ.
ಜು.8ರಿಂದ 25ರವರೆಗೆ ಜಿಲ್ಲೆಯಾದ್ಯಾಂತ ಸ್ವಯಂಪ್ರೇರಿತ ಲಾಕ್ ಡೌನ್ ಮಾಡಲು ವಿವಿಧ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದ್ದು ಜಿಲ್ಲೆಯ ಎಲ್ಲಾ ರೀತಿಯ ವ್ಯಾಪಾರ ವಹಿವಾಟು, ರಿಕ್ಷಾ, ಕ್ಯಾಬ್, ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಲಭ್ಯವಿರಲಿದೆ. ಮಧ್ಯಾಹ್ನ 1 ಗಂಟೆಯಿಂದ ಸ್ವಯಂಪ್ರೇರಿತ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದ್ದು ಜಿಲ್ಲೆಯ ಜನತೆ, ವ್ಯಾಪಾರಸ್ಥರು, ಬಸ್ ಮಾಲಕರು ರಿಕ್ಷಾ ಚಾಲಕರು, ಅಂಗಡಿಗಳ ಮಾಲಕರು ಸಹಕರಿಸಿ ಎಂದು ಸಂದೇಶ ರವಾನಿಸಲಾಗಿತ್ತು. ಆದರೆ ಅಂತಹ ಯಾವ ಪ್ರಸ್ತಾಪವೂ ನನ್ನ ಗಮನಕ್ಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರತಿಕ್ರಿಯಿಸಿದ್ದಾರೆ.