ಮಂಗಳವಾರದಿಂದ 1 ವಾರ ಬೆಂಗಳೂರು ಲಾಕ್ ಡೌನ್!

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಒಂದು ವಾರ ಲಾಕ್‌ಡೌನ್‌ ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಂಗಳವಾರದಿಂದ ಒಂದು ವಾರ ಸಿಲಿಕಾನ್ ಸಿಟಿ ಸಂಪೂರ್ಣವಾಗಿ ಬಂದ್ ಆಗಲಿದೆ. ಅಗತ್ಯ ವಸ್ತುಗಳ ಪೂರೈಕೆ, ತುರ್ತು ವೈದ್ಯಕೀಯ ಸೇವೆಗೆ ಅವಕಾಶ ಬಿಟ್ಟರೆ ಉಳಿದೆಲ್ಲವೂ ಸ್ಥಗಿತಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಕೊವಿಡ್ ನಿಯಂತ್ರಣ ಮಾಡಲು ಒಂದು ವಾರ ಲಾಕ್‌ಡೌನ್‌ ಅಗತ್ಯ ಎಂದು ತಜ್ಞರು ಸಿಎಂಗೆ ಸಲಹೆ ನೀಡಿದ್ದರು. ತಜ್ಞರ ಸಲಹೆ ಸಮ್ಮತಿಸಿರುವ ಯಡಿಯೂರಪ್ಪ ಲಾಕ್‌ಡೌನ್ ಮಾಡಲು ಒಪ್ಪಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *