ಭಾರೀ ಮಳೆಗೆ ಕುಸಿದ ಕೋಳಿ ಫಾರಂ, ಲಕ್ಷಾಂತರ ರೂ. ನಷ್ಟ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾವ್ಯ ಗ್ರಾಮದ ಬೀಜದಡಿ ಎಂಬಲ್ಲಿ ಇಂದು ಭಾರೀ ಗಾಳಿ-ಮಳೆಗೆ ಕೋಳಿ ಫಾರಂ ಕಟ್ಟಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಬೀಜದಡಿ ನಿವಾಸಿ ಸಂದೀಪ್ ಪೂಜಾರಿ ಎಂಬವರು ಕೋಳಿ ಫಾರಂ ಘಟಕ ನಡೆಸುತ್ತಿದ್ದರು. ಇದರಲ್ಲಿ ಸುಮಾರು 3,800 ಕೋಳಿಗಳನ್ನು ಸಾಕಲಾಗುತ್ತಿತ್ತು. ಮಧ್ಯಾಹ್ನ ಭಾರೀ ಗಾಳಿ ಮಳೆ ಸುರಿದಿದ್ದು ಈ ವೇಳೆ ಕಟ್ಟಡ ಕುಸಿದಿದೆ. ನೂರಾರು ಕೋಳಿಗಳು ಸಾವನ್ನಪ್ಪಿವೆ. ಅಂದಾಜು 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *