ಬೈಂದೂರಿನ ವಿದ್ಯಾರ್ಥಿನಿಗೂ ಕೊರೊನಾ ಪಾಸಿಟಿವ್!

ಉಡುಪಿ: ಎಸ್ಸೆಸ್ಸೆಲ್ಸಿ ಬರೆದಿದ್ದ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರಲ್ಲಿ ಈ ಹಿಂದೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು ಇಂದು ಮತ್ತೆ ಬೈಂದೂರು ಮೂಲದ ವಿದ್ಯಾರ್ಥಿನಿಯಲ್ಲಿ ಸೋಂಕು ಪತ್ತೆಯಾಗಿದೆ. ಆಕೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಸಂಜೆ ಉಪ್ಪುಂದದ ವಿದ್ಯಾರ್ಥಿನಿಗೆ ಕೊರೊನಾ ದೃಢಪಟ್ಟಿದೆ. ಬೈಂದೂರಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಎರಡು ಪರೀಕ್ಷೆಗಳನ್ನು ಬರೆದಿರುವ ವಿದ್ಯಾರ್ಥಿನಿಗೆ ಶನಿವಾರ ಸಂಜೆ ಬೆನ್ನುನೋವು ಕಾಣಿಸಿಕೊಂಡಿತ್ತು. ಸೋಮವಾರ ಪರೀಕ್ಷೆ ಇದ್ದ ಕಾರಣ ಪ್ರಾಂಶುಪಾಲರಿಗೆ ಈ ವಿಚಾರ ತಿಳಿಸಿದ್ದರು. ಸೋಮವಾರ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿರಲಿಲ್ಲ. ಸೋಮವಾರ ಆಕೆಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮಂಗಳವಾರ ಕೊರೊನಾ ದೃಢ ಪಟ್ಟಿದೆ. ವಿದ್ಯಾರ್ಥಿನಿಗೆ ಹೇಗೆ ಸೋಂಕು ತಗಲಿದೆ ಎನ್ನುವುದು ನಿಗೂಢವಾಗಿದೆ. ವಿದ್ಯಾರ್ಥಿನಿಯ ಮನೆ ಪಕ್ಕದಲ್ಲಿ ಮಹಾರಾಷ್ಟ್ರದಿಂದ ಬಂದವರಿದ್ದರು ಎನ್ನಲಾಗಿದೆ.