ಬೆಳ್ತಂಗಡಿ: ಗೋಸಾಗಾಟ ತಡೆದ ಭಜರಂಗಿಗಳ ಮೇಲೆ ತಲವಾರು ದಾಳಿ!

ಮಂಗಳೂರು: ಅಕ್ರಮವಾಗಿ ಪಿಕಪ್ ವಾಹನದಲ್ಲಿ ಮೂರು ದನ, ಎರಡು ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದಾಗ ಭಜರಂಗದಳ ಸಂಘಟನೆ ಕಾರ್ಯಕರ್ತರು ತಡೆದ ಘಟನೆ ಇಂದು ನಸುಕಿನ ಜಾವ ಬೆಳ್ತಂಗಡಿ ಸಮೀಪ ನಡೆದಿದೆ. ಈ ವೇಳೆ ಗೋಸಾಗಾಟಗಾರರು ಇಬ್ಬರು ಭಜರಂಗದಳ ಕಾರ್ಯಕರ್ತರ ಮೇಲೆ ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ಪಿಕಪ್ ವಾಹನದಲ್ಲಿ ನಗರದ ಕಂಕನಾಡಿಯ ಪಿ.ಕೆ. ಚಿಕನ್ ಸೆಂಟರ್ ಹೆಸರಲ್ಲಿ ಪಡೆದ ಕೋವಿಡ್-19 ಪಾಸ್ ಮೂಲಕ ಗೋಸಾಗಾಟ ನಡೆಯುತ್ತಿದ್ದು ಖಚಿತ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ದನಗಳನ್ನು ಬೆಳ್ತಂಗಡಿಯ ಸುರ್ಯ ಪಡ್ಪುವಿನ ಮನೆಯೊಂದರಿಂದ ಸಾಗಿಸಲಾಗುತ್ತಿತ್ತು. ರಾಜೇಶ್ ಮತ್ತು ಆತನ ಸಹಚರರು ಈ ವೇಳೆ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಪಿಕಪ್ ವಾಹನದೊಂದಿಗೆ ಬರುತ್ತಿದ್ದ ಬೆಂಗಾವಲು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಮತ್ತೊಂದು ತಂಡವನ್ನು ಗುರುವಾಯನಕೆರೆ ಬಳಿ ತಡೆದು ನಿಲ್ಲಿಸಿದ್ದು ಆರೋಪಿಗಳು ಪರಾರಿಯಾಗಿದ್ದರೆ. ಹಲ್ಲೆಗೊಳಗಾದ ಭಜರಂಗದಳ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ.

Leave a Reply

Your email address will not be published. Required fields are marked *