ಬೆಳ್ತಂಗಡಿ: ಐವರು ಜುಗಾರಿಕೋರರ ಬಂಧನ, ನಾಲ್ವರು ಪರಾರಿ
ಲಕ್ಷ ರೂ. ನಗದು ವಶ

ಬೆಳ್ತಂಗಡಿ: ಇಲ್ಲಿನ ಸಬ್ ಇನ್ಸ್‌ಪೆಕ್ಟರ್ ನಂದ ಕುಮಾರ್ ಎಂ.ಎಂ ಅವರು ಠಾಣಾ ಸಿಬ್ಬಂದಿ ಗಳೊಂದಿಗೆ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ಆಡುತಿದ್ದಲ್ಲಿಗೆ ದಾಳಿ ನಡೆಸಿ ಒಟ್ಟು 5 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಇಂದು ನಡೆದಿದೆ.
ಬಂಧಿತರನ್ನು ಗುರುವಾಯನಕೆರೆ ಯ ಫಾರೂಕ್, ಪಣೆಜಾಲಿನ ಪ್ರಸನ್ನ, ಬೆಳಾಲಿನ ಯಾಕೂಬ್, ಗೋವಿಂದೂರಿನ ಸುಧಾಕರ ಶೆಟ್ಟಿ ಮತ್ತು ರೋಹಿತ್ ಜಾರಿಗೆಬೈಲ್ ಎಂಬವರೆಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ
1, 03, 370 ರೂ.ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ನಡೆದ ಈ ದಾಳಿಯ ವೇಳೆ ತಂಡದಲ್ಲಿದ್ದ ಇತರ ನಾಲ್ವರು ತಪ್ಪಿಸಿಕೊಂಡಿರುತ್ತಾರೆ. ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.