ಬೀಡಾಡಿ ದನಗಳನ್ನು ನೀಲಾವರ ಗೋಶಾಲೆಗೆ ಸಾಗಿಸಿದ ಹಿಂಜಾವೇ ಕಾರ್ಯಕರ್ತರು

ಗಂಗೊಳ್ಳಿ: ಗಂಗೊಳ್ಳಿ ಸುತ್ತಮುತ್ತ ಅಕ್ರಮ ಜಾನುವಾರು ಸಾಗಾಟ, ದನಗಳ್ಳತನ ಮಿತಿಮೀರಿದ್ದು ಇದನ್ನು ಗಮನಿಸಿದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಬೀಡಾಡಿ ಜಾನುವಾರುಗಳನ್ನು ಹಿಡಿದು ನೀಲಾವರ ಗೋಶಾಲೆಗೆ ಸಾಗಿಸಿ ಮಾನವೀಯತೆ ಮರೆದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಗಂಗೊಳ್ಳಿ ಪರಿಸರದಲ್ಲಿ ನಿರಂತರವಾಗಿ ಜಾನುವಾರು ಕಳ್ಳತನ ಹಾಗೂ ಅಕ್ರಮ ಗೋಸಾಗಾಟ ನಡೆಯುತ್ತಿತ್ತು. ಮೇಯಲು ಬಿಟ್ಟಿದ್ದ ನೂರಾರು ಜಾನುವಾರುಗಳು ಗೋಕಳ್ಳರ ಪಾಲಾಗಿತ್ತು. ಹೀಗಾಗಿ ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಾಡುತ್ತಿರುವ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ನಿರ್ಧಾರ ಕೈಗೊಂಡ ಹಿಂಜಾವೇ ಕಾರ್ಯಕರ್ತರು, ಕಳೆದ ನಾಲ್ಕೈದು ದಿನಗಳಿಂದ ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯ ನಡೆಸಿದ್ದರು. 24 ಜಾನುವಾರುಗಳನ್ನು ವಾಹನಗಳಲ್ಲಿ ನೀಲಾವರ ಗೋಶಾಲೆಗೆ ಸಾಗಿಸಿರುವ ಸಂಘಟನೆಯ ಕಾರ್ಯಕರ್ತರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಾಸುವೇದ ದೇವಾಡಿಗ, ಬೈಂದೂರು ಕಾರ್ಯಕಾರಣಿ ಸದಸ್ಯ ರತ್ನಾಕರ ಗಾಣಿಗ, ಬೈಂದೂರು ಪ್ರಧಾನ ಕಾರ್ಯದರ್ಶಿ ನವೀನ ದೊಡ್ಡಹಿತ್ಲು, ಸಹ ಕಾರ್ಯದರ್ಶಿ ಮೋಹನ ಖಾರ್ವಿ, ಸಹ ಕಾರ್ಯದರ್ಶಿ ರಾಘವೇಂದ್ರ ಗಾಣಿಗ, ಯಶವಂತ ಖಾರ್ವಿ ನೇತೃತ್ವದಲ್ಲಿ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *