`ಬಿಜೆಪಿ ಸರಕಾರ ಕೊರೊನಾದಲ್ಲಿ ಸತ್ತವರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ’ -ಡಿಕೆಶಿ ಕಿಡಿ

ಮಂಗಳೂರು:
ಬಿಜೆಪಿ ಸರಕಾರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ. ಇದು ಸರಕಾರಕ್ಕೆ ಬಲುದೊಡ್ಡ ಶಾಪ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಗರದಲ್ಲಿ ಹರಿಹಾಯ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಶಿವಕುಮಾರ್ ಅವರು, ರಾಜ್ಯ ಸರಕಾರ ಕೊರೊನಾದಿಂದ ಸಾವನ್ನಪ್ಪಿದವರ ಹೆಣಗಳಿಂದ ದುಡ್ಡು ಮಾಡಲು ಹೊರಟಿದೆ. ಕೊರೊನಾಕ್ಕಿಂತ ಬಿಜೆಪಿಯ ಭ್ರಷ್ಟಾಚಾರ ಭೀಕರವಾದುದು' ಎಂದು ಹೇಳಿದರು.
ಬಿಜೆಪಿ ಸರಕಾರ ನನ್ನ ಮೇಲೆ ಇಡಿ, ಸಿಬಿಐ ಇಲಾಖೆಯ ಮೂಲಕ ದಾಳಿ ಮಾಡಿಸಿದೆ. ನನ್ನನ್ನು ಗಲ್ಲಿಗೆ ಹಾಕಲು ಹೊರಟಿದ್ದು ಸರಕಾರದಿಂದ ಲೀಗಲ್ ನೊಟೀಸ್ ಬಂದಿದೆ. ನೋಟಿಸ್ಗೆ ಉತ್ತರ ನೀಡುತ್ತೇವೆ’ ಎಂದು ಡಿಕೆ ಶಿವಕುಮಾರ್ ಹೇಳಿದರು. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ನಿಂತಿದೆ. ಬೇಕಾಬಿಟ್ಟಿ ಬಿಲ್ಗಳನ್ನು ನೀಡುತ್ತಾರೆ. ನಾಲ್ಕು ಲಕ್ಷ ಮೌಲ್ಯದ ವೆಂಟಿಲೇಟರ್, ಕಿಟ್ನ್ನು 18 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ನಾನು 1050 ರೂಪಾಯಿಗೆ ಥರ್ಮಲ್ ಸ್ಕ್ಯಾನ್ನ್ನು ಖರೀದಿ ಮಾಡಿದ್ದೇನೆ. 100 ರೂಪಾಯಿಗೆ ಸ್ಯಾನಿಟೈಸರ್ನ್ನು ಖರೀದಿ ಮಾಡಿದ್ದೇನೆ. ಆದರೆ ಸರಕಾರ ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದ್ದೀರಿ’ ಎಂದು ಟೀಕೆ ಮಾಡಿದ್ದೀರಿ.