`ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ’ ಬೆಳ್ತಂಗಡಿಯಲ್ಲಿ ಡಿಕೆಶಿ ಹೇಳಿಕೆ

ಬೆಳ್ತಂಗಡಿ:
ಕಾಂಗ್ರೆಸ್ ಆರೋಪದಿಂದ ತತ್ತರಿಸಿಹೋಗಿರುವ ಬಿಜೆಪಿ ಜನರ ಹಾದಿ ತಪ್ಪಿಸಲು ಏನೇನೋ ಹೇಳಿಕೆ ನೀಡುತ್ತಿದೆ. ಆಡಳಿತ ವೈಫಲ್ಯ ಸಹಿಸಿಕೊಳ್ಳಲಾಗದೆ ಪೊಲೀಸ್ ಆಯುಕ್ತರನ್ನು ವರ್ಗಾವಣೆಗೊಳಿಸಿದೆ’ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಧರ್ಮಸ್ಥಳ ಭೇಟಿಯ ಹಿನ್ನೆಲೆಯಲ್ಲಿ ಬೆಳ್ತಂಗಡಿಗೆ ಆಗಮಿಸಿದ ಶಿವಕುಮಾರ್, ಮಾಜಿ ಶಾಸಕ ವಸಂತ ಬಂಗೇರ ಅವರ ಕಚೇರಿಗೆ ಭೇಟಿ ನೀಡಿ ಬಳಿಕ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದರು.
ಯೋಗೇಶ್ವರ್ ವೀಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿದ್ದು ಅವರಲ್ಲಿ ವಿಡಿಯೋ ಇದ್ದರೆ ತಕ್ಷಣ ಬಿಡುಗಡೆ ಗೊಳಿಸಲಿ. ಎಂತೆಂತಹಾ ಸವಾಲುಗಳನ್ನು ಗೆದ್ದಿದ್ದೇನೆ. ಈ ಬೆದರಿಕೆಯನ್ನೂ ಎದುರಿಸಲು ಸಿದ್ಧ ಎಂದು ಈ ಸಂದರ್ಭದಲ್ಲಿ ಡಿಕೆಶಿ ಹೇಳಿದರು.
