ಬಾಲಕಿ ಅತ್ಯಾಚಾರ: ಮೀನು ವ್ಯಾಪಾರಿ ಬಂಧನ

ಮೂಡಬಿದ್ರೆ: ಇತ್ತೀಚೆಗೆ ಮಾರ್ಪಾಡಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೀನು ವ್ಯಾಪಾರಿ, ಬೆಳ್ತಂಗಡಿಯ ಕೋಟೆಬಾಗಿಲು ನಿವಾಸಿ ಆಸಿಫ್ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೂಡಬಿದ್ರೆಯಲ್ಲಿ ವಾಸಿಸುತ್ತಿದ್ದ ತಮಿಳು ಮೂಲದ ಕೂಲಿ ಕಾರ್ಮಿಕರ ಪುತ್ರಿಯ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ ಆಕೆಯನ್ನು ಪುಸಲಾಯಿಸಿ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾಗಿ ದೂರು ದಾಖಲಾಗಿತ್ತು. ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.