ಬಾಣಂತಿಯರಿಗೆ ಕೊರೊನಾ: ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಸೀಲ್ಡೌನ್!?

ಬೆಳ್ತಂಗಡಿ: ಇಲ್ಲಿನ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್, ಮೂವರು ದಾದಿಯರಿಗೆ ಕೊರೊನಾ ದೃಢಪಟ್ಟಿದ್ದು, ಅವರೆಲ್ಲ ಐಸೋಲೇಶನ್ ಗೊಳಗಾಗಿರುವ ಮಧ್ಯೆಯೇ ಇದೀಗ ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಬಾಣಂತಿಯರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ನಿನ್ನೆ ಇಬ್ಬರು ಬಾಣಂತಿಯರಿಗೆ ಕೊರೊನಾ ದೃಢಪಟ್ಟಿದ್ದು ಓರ್ವ ಬಾಣಂತಿ ಮತ್ತು ಮಗುವನ್ನು ಆಕೆಯ ಗಂಡ ಆಸ್ಪತ್ರೆಯಿಂದ ಕರೆದೊಯ್ದಿರುವ ವದಂತಿ ಇದೆ. ಈ ಮಧ್ಯೆ ಇಂದು ಇನ್ನಷ್ಟು ಬಾಣಂತಿಯರ ವರದಿ ಬರಲಿದ್ದು ಇದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸ್ಪೋಟಗೊಳ್ಳುವ ಅನುಮಾನ ದಟ್ಟವಾಗಿದೆ. ಆ ಹಿನ್ನೆಲೆಯಲ್ಲಿ ಇಂದೇ ಸರಕಾರಿ ಆಸ್ಪತ್ರೆ ಸೀಲ್ಡೌನ್ ಆಗಲಿದೆ ಎಂದು ಹೇಳಲಾಗಿದೆ.
ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದ ನಾವೂರಿನ ಮಹಿಳೆಯೋರ್ವರಿಗೆ ಕೊರೊನಾ ದೃಢವಾಗಿದ್ದು, ಅವರು ಮಗುವಿನ ಸಮೇತ ಅಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ಪರೀಕ್ಷಾ ವರದಿ ಬಂದಿದ್ದು, ರಾತ್ರಿ ಅಸ್ಪತ್ರೆಯ ಸಿಬ್ಬಂದಿಗೂ ತಿಳಿಸದೆ ಹೋಗಿದ್ದಾರೆ, ರಾತ್ರಿ ಮಹಿಳೆಯ ಪತಿ ಕಾರ್ನಲ್ಲಿ ಬಂದವರು ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಬಾಣಂತಿ ಅದಿಕೃತವಾಗಿ ಡಿಸ್ಚಾರ್ಜ್ ಆಗದೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಆಸ್ಪತ್ರೆಯ ಮೂಲಗಳಿಂದ ಲಭ್ಯವಾಗಿದೆ. ನಾವೂರಿನ ಮನೆಗೂ ಅವರು ತಲುಪಿಲ್ಲ. ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿಲ್ಲ. ಇದು ಅತಂಕದ ವಿಷಯವಾಗಿ ಕಾಡುತ್ತಿದೆ.
ಬೆಳ್ತಂಗಡಿಯ ಪರಿಕ್ರಮ ಲಾಡ್ಜ್ನಲ್ಲಿ ಕ್ವಾರಂಟೈನ್ನಲ್ಲಿದ್ದವರು ನಿಮಯ ಉಲ್ಲಂಘಿಸಿ ತಿರುಗಾಡಿದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಜಿಪಿಎಸ್ ಆಧಾರಿತ ಮಾಹಿತಿ ಪಡೆದು ನೆರಿಯ ಗ್ರಾಮದ ಆಂಟೋನಿ ಪಿ.ಟಿ ಎಂಬವರ ವಿರುದ್ದ ಬೆಳ್ತಂಗಡಿ ಪೆÇಲೀಸರು ಕಠಿಣ ಕಾನೂನು ಕ್ರಮ ಜರಗಿಸಿದ್ದಾರೆ. ಸದ್ರಿ ವ್ಯಕ್ತಿಯ ಮೇಲೆ ಕಲಂ 269,270,271 ಐಪಿಸಿ ಮತ್ತು 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆದ್ಯಾದೇಶ 2020ರಂತೆ ಬೆಳ್ತಂಗಡಿ ಠಾಣಾ ಪಿಎಸ್ಐ ನಂದಕುಮಾರ್ ಎಂ.ಎಂ. ಕೇಸ್ ದಾಖಲಿಸಿಕೊಡಿದ್ದು ತನಿಖೆ ಮುಂದುವರಿಸಿದ್ದಾರೆ. ಕೋವಿಡ್-19 ಸಾಂಕ್ರಮಿಕ ರೋಗದ ನಿಯಮ ಉಲ್ಲಂಘಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಇಲಾಖೆ ನೀಡಿದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ನಿರ್ದೇಶಿಸಿದ ಈ ಕ್ರಮ ಜರುಗಿಸಲಾಗಿದೆ.