ಬಸ್ಸ್ಟ್ಯಾಂಡ್ನಲ್ಲೇ ಆತ್ಮಹತ್ಯೆ: ಬೆಚ್ಚಿಬಿದ್ದ ನಾಗರಿಕರು

ಕಾರ್ಕಳ: ವ್ಯಕ್ತಿಯೋರ್ವರು ಬಸ್ಸ್ಟ್ಯಾಂಡ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಗ್ರಾಮಾಂತರ ಠಾಣೆಯ ಪಳ್ಳಿಗ್ರಾಮದ ಅಡಪಾಡಿಪದವು ಎಂಬಲ್ಲಿ ನಡೆದಿದೆ.
ಕೊರೊನಾದ ಸಂದರ್ಭದಲ್ಲಿ ಇಂಥದೊಂದು ಘಟನೆ ನಡೆದಿರುವುದು ಸಾರ್ವಜನಿಕರು ಬೆಚ್ಚಿಬೀಳಲು ಕಾರಣವಾಗಿದೆ.
ಬ್ರಹ್ಮಾವರ ಮೂಲದ ವಸಂತಪ್ಪ(62) ಆತ್ಮಹತ್ಯೆಗೈದ ವ್ಯಕ್ತಿ. ಇವರ ತಲೆಯ ಬಳಿ ವಿಷದ ಬಾಟಲ್ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಅಡಪಾಡಿಪದವು ಬಳಿ ವಸಂತಪ್ಪರ ಪತ್ನಿಯ ಮನೆಯಿದ್ದು, ಇಲ್ಲಿಗೆ ಬಂದಿದ್ದರು. ಆದರೆ ಇಂದು ಮಧ್ಯಾಹ್ನ ಬಸ್ಸ್ಟ್ಯಾಂಡ್ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಜನರು ಕೊರೊನಾ ಭೀತಿಯಲ್ಲಿರುವಾಗಲೇ ವ್ಯಕ್ತಿ ಈ ರೀತಿ ಆತ್ಮಹತ್ಯೆ ಮಾಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಜನರು ಮೃತದೇಹದತ್ತ ಸುಳಿಯದೆ ದೂರದಿಂದ ಬಂದು ನೋಡುತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಲಾಗಿದೆ.