ಬಸ್ಸಿಗೆ ರೈಲು ಡಿಕ್ಕಿ: 19 ಮಂದಿ ಮೃತ್ಯು

ಇಸ್ಲಾಮಬಾದ್: ರೈಲ್ವೇ ಕ್ರಾಸಿಂಗ್ ವೇಳೆ ಬಸ್‍ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಶೇಖ್‍ಪುರದಲ್ಲಿ ಇಂದು ನಡೆದಿದೆ. ಮಧ್ಯಾಹ್ನ ಘಟನೆ ನಡೆದಿದ್ದು, ಪಾಕಿಸ್ತಾನದ ಪಂಜಾಬ್ ಜಿಲ್ಲೆಯ ಶೇಖ್‍ಪುರದಲ್ಲಿ ಲಾಹೋರ್‍ಗೆ ಚಲಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಬಸ್ಸಲ್ಲಿ ಸುಮಾರು 15 ಮಂದಿ ಸಿಖ್ ಯಾತ್ರಿಕರು ಪ್ರಯಾಣ ಮಾಡುತ್ತಿದ್ದರು. ಶಾ ಹುಸೇನ್ ಎಕ್ಸ್‍ಪ್ರೆಸ್ ಶೇಖ್‍ಪುರದ ಕ್ರಾಸಿಂಗ್‍ನಲ್ಲಿ ಅಡ್ಡ ಬಂದ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪ್ರಯಾಣಿಕರು ಪೇಶಾವರದಿಂದ ಲಾಹೋರ್‍ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
