ಬಂಧಿತ ಆರೋಪಿಗೆ ಕೊರೊನಾ ಪಾಸಿಟಿವ್: ಬಜಪೆ ಪೊಲೀಸ್ ಠಾಣೆ ಸೀಲ್‌ಡೌನ್

ಕುಪ್ಪೆಪದವು: ಬಂಧಿತ ಆರೋಪಿಯೊಬ್ಬನಲ್ಲಿ ಕೋವಿಡ್ -19ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಯನ್ನು 48 ಗಂಟೆಗಳವರೆಗೆ ಸೀಲ್‌ಡೌನ್ ಮಾಡಲಾಗಿದೆ.
ನಿನ್ನೆ ಒಡ್ಡಿದಕಲ ಎಂಬಲ್ಲಿ ದುಷ್ಕ್ರತ್ಯ ನಡೆಸಲು ಹೊಂಚು ಹಾಕಿ ಕುಳಿತಿದ್ದ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ಓರ್ವನಿಗೆ ಪಾಸಿಟಿವ್ ಕಂಡುಬಂದಿದೆ. ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಒಟ್ಟು 8 ಪೊಲೀಸರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

Leave a Reply

Your email address will not be published. Required fields are marked *