ಬಂಟ್ವಾಳ: ಸೇತುವೆಯಿಂದ‌ ಮಹಿಳೆ ಹಾರಿ ಆತ್ಮಹತ್ಯೆ ಶಂಕೆ

ಬಂಟ್ವಾಳ : ಮಹಿಳೆಯೊಬ್ಬಳು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳೀಯ ಮುಳುಗುತಜ್ಞರಿಂದ ಮಹಿಳೆಗಾಗಿ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ.

ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಗೋಪಿ ಪೂಜಾರಿ (49) ಕಾಣೆಯಾಗಿರುವ ಮಹಿಳೆ, ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ನಿವಾಸಿಯಾಗಿರುವ ಗೋಪಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ನದಿಗೆ ಹಾರಿ ಆತ್ಮಹತ್ಯೆ ಮಾಡಿರಬೇಕು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಅವರು ಅಕ್ಕನ ಮನೆ ಬಿಸಿರೋಡಿನ ಚಿಕ್ಕಯ್ಯಮಠ ಎಂಬಲ್ಲಿ ಕೆಲದಿನಗಳಿಂದ ತಂಗಿದ್ದರು. ಎಂದಿನಂತೆ ಊಟ ಮಾಡಿ ಮಲಗಿದ ಮಹಿಳೆ ಮುಂಜಾನೆ 5 ಗಂಟೆಯ ವೇಳೆ ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದಾರೆ

ಮನೆಯವರು ಹುಡುಗಾಟ ನಡೆಸಿದಾಗ ಪಾಣೆಮಂಗಳೂರು ನೂತನ ಸೇತುವೆಯ ಮೇಲೆ ಗೋಪಿ ಅವರು ಬಳಸುತ್ತಿದ್ದ ಶಾಲು ಹಾಗೂ ಕೈಯಲ್ಲಿದ್ದ ಬಳೆ ಬಿದ್ದಿದೆ.

ಹಾಗಾಗಿ ಅವರು ನೇತ್ರಾವತಿ ಸೇತುವೆ ಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಗೋಪಿ ಅವರು ಈ ಹಿಂದೆಯೂ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ

Leave a Reply

Your email address will not be published. Required fields are marked *