ಬಂಟ್ವಾಳ: ಕೋವಿಡ್-19 ಸೋಂಕಿಗೆ ವೖದ್ಧ ಬಲಿ: ಒಟ್ಟು ಮೖತರ ಸಂಖ್ಯೆ 6ಕ್ಕೆ ಏರಿಕೆ

ಬಂಟ್ವಾಳ: ತಾಲೂಕಿನಲ್ಲಿ ವೃದ್ದರೊಬ್ಬರು ಶನಿವಾರ ಕೊರೊನಾ ಸೊಂಕಿಗೆ ಮೃತಪಟ್ಟಿದ್ದು, ಆ ಮೂಲಕ ತಾಲೂಕಿನಲ್ಲಿ ಮೖತರ ಸಂಖ್ಯೆ ಒಟ್ಟು 6 ಕ್ಕೆ ಏರಿಕೆಯಾಗಿದೆ.

ತಾಲ್ಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೂಡಾ ದಿನೇ ದಿನೇ ಹೆಚ್ಚಳವಾಗುತ್ತಿರುವುದು ಇಲ್ಲಿನ ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಇಲ್ಲಿನ ಮಾರಿಪಳ್ಳ ನಿವಾಸಿ 85 ರ ಹರೆಯದ ವೖದ್ಧರೊಬ್ಬರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.

ಅವರು ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಹಿಂದೆ ಬಂಟ್ವಾಳ ಪೇಟೆಯಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರು ಸಾವನ್ನಪ್ಪಿದ್ದರು.

Leave a Reply

Your email address will not be published. Required fields are marked *