ಪೂಜಾರಿ ಗುಣಮುಖರಾಗಲು ರಕ್ತೇಶ್ವರಿ ಸನ್ನಿಧಿಯಲ್ಲಿ ಪೂಜೆ!

ಮಂಗಳೂರು: ಮಾಜಿ ಕೇಂದ್ರ ಸಚಿವ ಪೂಜಾರಿ ಅವರು ಕೊರೊನಾ ಪಾಸಿಟಿವ್ ನಿಂದಾಗಿ ಆಸ್ಪತ್ರೆ ಸೇರಿದ್ದು ಅವರು ಬೇಗನೆ ಗುಣಮುಖರಾಗಿ ಮನೆಗೆ ಬರುವಂತೆ ಪ್ರಾರ್ಥಿಸಿ ಇಂಟಕ್ ಪದಾಧಿಕಾರಿಗಳು ಇಂದು ಬಿ.ಸಿ.ರೋಡ್ ರಕ್ತೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತು ಅವರ ಪತ್ನಿಗೆ ಮಹಾಮಾರಿ ಕೊರೊನಾ ಬಂದಿರುವುದರಿಂದ ಶೀಘ್ರ ಗುಣಮುಖರಾಗಲಿ ಎಂದು ಜಿಲ್ಲಾ ಇಂಟಕ್ ಪ್ರದಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ನೇತೃತ್ವದಲ್ಲಿ ರಕ್ತೇಶ್ವರಿ ದೇವಿಗೆ ಪೂಜಾರಿ ಕುಟುಂಬದ ಪರವಾಗಿ ಹೂವಿನ ಪೂಜೆ ಮಾಡಿಸಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರದಾನ ಕಾರ್ಯದರ್ಶಿ ಸುರೇಶ್ ಪೂಜಾರಿ ಜೋರ, ಸೋಮನಾಥ್ ಚಂಡ್ತಿಮಾರ್, ಗಣೇಶ್ ನಾಯ್ಕ್, ಸಂತೋಷ್ ಕುಮಾರ್, ಲೋಕೇಶ್ ಸುವರ್ಣ, ರಂಜಿತ್ ಪೂಜಾರಿ ನಂದರಬೆಟ್ಟು ಉಪಸ್ಥಿತರಿದ್ದರು.