ಪುತ್ತೂರು: ಕಂಪೌಂಡ್ ಗೋಡೆ ಕುಸಿದು ಮಹಿಳೆ ಮೃತ್ಯು

ಮಂಗಳೂರು: ಪುತ್ತೂರು ತಾಲೂಕಿನ ಗೋಳಿಕಟ್ಟೆ ಬಾಲಮಂದಿರ ಬಳಿ ಮನೆಯೊಂದರ ಕಂಪೌಂಡ್ ಕುಸಿದು ಮಹಿಳೆ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಚಂದ್ರಶೇಖರ ಎಂಬವರ ಪತ್ನಿ ಶೋಭಾ(49) ಎಂದು ಹೆಸರಿಸಲಾಗಿದೆ.
ಭಾರೀ ಮಳೆಯಿಂದಾಗಿ ಕಂಪೌಂಡ್ ಗೋಡೆ ಬಲ ಕಳೆದುಕೊಂಡಿದ್ದು ಶೋಭಾ ಅವರ ಮೇಲೆ ಮಗುಚಿಬಿದ್ದಿದೆ. ಇದರಿಂದ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಪುತ್ತೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *