ಪಿ.ಎಲ್.ಡಿ ಬ್ಯಾಂಕ್ ಮಾಜಿ‌ ನಿರ್ದೇಶಕ ಕಾಶಿಪಟ್ಣ ಕೇಳದಪೇಟೆ ಅನೂಪ್‌ ಕುಮಾರ್ ಜೈನ್ ನಿಧನ

ಬೆಳ್ತಂಗಡಿ; ಕಾಶಿಪಟ್ಣ ಗ್ರಾಮದ ಕೇಳದಪೇಟೆ ಹೊಸಮನೆ ನಿವಾಸಿ, ಬೆಳ್ತಂಗಡಿ ಪಿ.ಎಲ್.ಡಿ‌ ಬ್ಯಾಂಕ್ ಮಾಜಿ ನಿರ್ದೇಶಕ ಅನೂಪ್ ಕುಮಾರ್ ಜೈನ್ (67) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಅವರು ಕಾಶಿಪಟ್ಣ ಗ್ರಾ.ಪಂ ಮಾಜಿ ಸದಸ್ಯರಾಗಿದ್ದರು. ಕೇಳದಪೇಟೆ ಶ್ರೀ ಅನಂತನಾಥ ಸ್ವಾಮಿ ಬಸದಿಯ ಕಾರ್ಯಾಧ್ಯಕ್ಷರಾಗಿ‌ ಪರಿಚಿತರಾಗಿದ್ದರು.
ಮೃತರು ಪತ್ನಿ ಅನಿತಾ, ಮಕ್ಕಳಾದ ಅಹಾನ ಮತ್ತು ಅಭಿಜ್ಞಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಮೃತದೇಹದ ಗಂಟಲು ದ್ರವ ಪರೀಕ್ಷೆ ನಡೆಸಿದ ಮರುದಿನ ಅವರ ಕೊರೊನಾ ವರದಿ ಪಾಸಿಟಿವ್ ಬಂದಿದ್ದರಿಂದ ಅಂತ್ಯಸಂಸ್ಕಾರ ವಿಧಿಗಳನ್ನು ಮಂಗಳೂರು ಬೋಳಾರದಲ್ಲಿ‌ ನಡೆಸಲಾಗಿದೆ

Leave a Reply

Your email address will not be published. Required fields are marked *