ಪಿಕಪ್ನಲ್ಲಿ ಅಕ್ರಮ ಜಾನುವಾರು ಸಾಗಾಟ: ಆರೋಪಿ ಬಂಧನ

ಬೆಳ್ತಂಗಡಿ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಎರಡು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಎಸ್.ಐ. ನಂದ ಕುಮಾರ್ ಎಂ.ಎಂ. ಅವರ ತಂಡ ಇಂದಬೆಟ್ಟು ಗ್ರಾಮದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದೆ.
ಬಂಧಿತ ವ್ಯಕ್ತಿಯನ್ನು ನಾವೂರು ಗ್ರಾಮದ ಕೈಕಂಬ ನಿವಾಸಿ ರಫೀಕ್ (36) ಎಂದು ಗುರುತಿಸಲಾಗಿದೆ.
ಆರೋಪಿಯು ಜು. 30 ರಂದು ಬೆಳಿಗ್ಗೆ 8 ಗಂಟೆಗೆ ಪರವಾನಿಗೆ ಇಲ್ಲದೆ ಕಿಲ್ಲೂರು ಕಡೆಯಿಂದ ಪಿಕಪ್ ವಾಹನದಲ್ಲಿ ಕಂದು ಬಣ್ಣದ 1 ಹಸು ಮತ್ತು 1 ಕರುವನ್ನು ರೌಂಡ್ಸ್ನಲ್ಲಿದ್ದ ಪೊಲೀಸರು ವಶಕ್ಕೆಪಡೆದುಕೊಂಡರು.
ಸ್ವಾದೀನಪಡಿಸಿಕೊಂಡ ಜಾನುವಾರು ಹಾಗೂ ಪಿಕಪ್ನ ಒಟ್ಟು ಮೌಲ್ಯ ರೂ. 5,14,000 ಆಗಬಹುದು ಎಂದು ಅಂದಾಜಿಸಲಾಗಿದೆ.