ಪಿಎಂ ಕೇರ್ ಫಂಡ್ ಗೆ `ಟಿಕ್ ಟಾಕ್’ 30 ಕೋಟಿ ದೇಣಿಗೆ, ಮರ್ಯಾದೆಯಿದ್ದರೆ ಅದನ್ನು ವಾಪಸ್ ಕೊಡಲಿ’ -ಖಾದರ್ ಸವಾಲು

ಮಂಗಳೂರು: ಕೇಂದ್ರ ಸರಕಾರ ಟಿಕ್ ಟಾಕ್ ಸಹಿತ 59 ಆ್ಯಪ್ ಗಳನ್ನು ಬ್ಯಾನ್ ಮಾಡಿ ಪ್ರಯೋಜನವೇನೂ ಇಲ್ಲ. ಅವುಗಳಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ. ಪ್ರಧಾನಿ ಕೇರ್ ಫಂಡ್ ಗೆ ಟಿಕ್ ಟಾಕ್ ನಿಂದ 30 ಕೋಟಿ ರೂ. ದೇಣಿಗೆ ಬಂದಿದೆ. ಮಾನ ಮರ್ಯಾದೆಯಿದ್ದರೆ ಆ ಹಣವನ್ನು ಸರಕಾರ ವಾಪಸ್ ಕೊಡಲಿ. ಸರಕಾರಕ್ಕೆ ಅವರ ಹಣ ತೆಗೆದುಕೊಳ್ಳಲು ನಾಚಿಕೆಯಾಗುವುದಿಲ್ಲವೇ?' ಎಂದು ಮಂಗಳೂರು ಶಾಸಕ ಯು.ಟಿ. ಖಾದರ್ ಸವಾಲೆಸೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು,
ಚೀನಾ ಆ್ಯಪ್ ಕಂಪೆನಿಯಲ್ಲಿ ಭಾರತೀಯರು ಉದ್ಯೋಗದಲ್ಲಿದ್ದರು. ಸರಕಾರದ ನಿರ್ಧಾರದಿಂದ ಅವರು ಕೆಲಸ ಕಳೆದುಕೊಂಡಿದ್ದಾರೆ. ಚೈನಾ ಆ?ಯಪ್ ಕಂಪೆನಿಯಲ್ಲಿ ಭಾರತೀಯರು ಉದ್ಯೋಗದಲ್ಲಿದ್ದರು ಆ್ಯಪ್ ಮೂಲಕ ಭಾರತೀಯರು ಆದಾಯ ಪಡೆಯುತ್ತಿದ್ದರು. ಕೇವಲ ಪ್ರಚಾರಕ್ಕಾಗಿ ಸರಕಾರ ಆ್ಯಪ್ ಬ್ಯಾನ್ ಮಾಡಿದೆ. ಸರಕಾರದ ನಿರ್ಧಾರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದಿದೆ ಎಂದು ಖಾದರ್ ವಾಗ್ದಾಳಿ ನಡೆಸಿದರು.