ಪಾಕ್ ಫೈರಿಂಗ್: ಯೋಧ ಹುತಾತ್ಮ!

ನವದೆಹಲಿ: ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‍ನಲ್ಲಿ ಪಾಕಿಸ್ತಾನ ಸೇನೆಯ ಗುಂಡಿನ ದಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ಭಾರತದ ಯೋಧ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧನನ್ನು ಹವಾಲ್ದಾರ್ ಸಂಬುರ್ ಗುರುಂಗ್ ಎಂದು ಹೆಸರಿಸಲಾಗಿದೆ.
ಗಡಿಯಲ್ಲಿ ಪಾಕ್ ಸೇನೆಯು ಕದನ ವಿರಾಮ ಉಲ್ಲಂಘನೆ ಮಾಡಿದ್ದು ಈ ವೇಳೆ ಪರಸ್ಪರ ಗುಂಡಿನ ದಾಳಿ ನಡೆದಿದೆ. ಮಾರ್ಟರ್ ಶೆಲ್ಲಿಂಗ್ ಮತ್ತು ಸ್ವಯಂಚಾಲಿತ ಶಾಸ್ತ್ರಾಸ್ತ್ರಗಳ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಮಹಿಳೆ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಕಮ್ ಬಿ ಮತ್ತು ರೇಷಮ್ ಬಿ ಎಂಬ ಇಬ್ಬರು ನಾಗರಿಕರೂ ಕೂಡಾ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯೋಧ ಸಂಬುರ್ ಗುರುಂಗ್ ಧೈರ್ಯಶಾಲಿ, ಪ್ರೇರಣಾತ್ಮಕ ವ್ಯಕ್ತಿತ್ವ ಮತ್ತು ಪ್ರಾಮಾಣಿಕ ಸೈನಿಕರಾಗಿದ್ದರು ಎಂದು ಭಾರತೀಯ ಸೇನೆ ತಿಳಿಸಿದೆ.