ಪಾಂಟಿಂಗ್‍ಗಿಂತ ಧೋನಿ ಶ್ರೇಷ್ಠ ನಾಯಕ

ದೆಹಲಿ: ರಿಕಿ ಪಾಂಟಿಂಗ್‍ಗಿಂತ ಎಮ್‍ಎಸ್ ಧೋನಿ ಶ್ರೇಷ್ಠ ನಾಯಕ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ
ಟ್ವಿಟ್ಟರ್‍ನಲ್ಲಿ ಪ್ರಶ್ನೋತ್ತರ ಅವಧಿಯನ್ನು ನಡೆಸಿದ ಅಫ್ರಿದಿಗೆ ಈ ಪ್ರಶ್ನೆ ಎದುರಾಗಿತ್ತು. ಧೋನಿ ರಿಕಿ ಪಾಂಟಿಂಗ್‍ಗಿಂತ ಶ್ರೇಷ್ಠ ಎಂದು ಮಾತ್ರವೇ ಹೇಳಿಲ್ಲ. ಅದಕ್ಕೆ ತಮ್ಮದೇ ಅದ ಕಾರಣವನ್ನೂ ಅಫ್ರಿದಿ ನೀಡಿದ್ದಾರೆ. ಯುವ ತಂಡವನ್ನು ಕಟ್ಟಿಕೊಂಡು ಟೀಮ್ ಇಂಡಿಯಾವನ್ನು ಮುನ್ನಡೆಸಿ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಹಾಗಾಗಿ ಪಾಂಟಿಂಗ್‍ಗಿಂತ ಧೋನಿ ಮುಂದಿದ್ದಾರೆ ಎಂದು ಅಫ್ರಿದಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ 2011ರ ಏಕದಿನ ವಿಶ್ವಕಪ್ ಗೆಲುವಿಗೂ ಮುನ್ನ 2007ರಲ್ಲಿ ತಂಡದ ಪ್ರಮುಖ ಆಟಗಾರರ ಅನುಪಸ್ಥಿಯಲ್ಲಿ ಚೊಚ್ಚಲ ಟಿ20 ವಿಶ್ವಕಪ್‍ನ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ರಿಕಿ ಪಾಂಟಿಂಗ್ ಆಸ್ಟ್ರೇಲಿಯಾಗೆ 2003 ಹಾಗೂ 2007ರಲ್ಲಿ ಸತತ ಎರಡು ವಿಶ್ವಕಪ್‍ಗಳನ್ನು ಗೆಲ್ಲಿಸಿದ್ದರು. ಆದರೆ ಅದ್ಕು ಮುನ್ನ ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ಸ್ಟೀವ್ ವಾ ನೇತೃತ್ವದಲ್ಲಿ ಉತ್ಕೃಷ್ಠ ಮಟ್ಟಕ್ಕೇರಿತ್ತು. ಅದಾಗಲೇ ಚೆನ್ನಾಗಿ ನೆಲೆಯೂರಿದ್ದ ತಂಡವನ್ನು ಮುನ್ನಡೆಸಿದ ಪಾಂಟಿಂಗ್ ಹಿಂದಿನ ಯಶಸ್ಸನ್ನು ಮುಂದುವರಿಸಿದ್ದರು ಎಂದು ಅಫ್ರಿದಿ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವ ಕ್ರಿಕೆಟ್‍ನ ಶ್ರೇಷ್ಠ ನಾಯಕರು ಎಂದು ಹೆಸರಾಗಿದ್ದಾರೆ. ತಮ್ಮ ನೇತೃತ್ವದಲ್ಲಿ ಇಬ್ಬರೂ ನಾಯಕರು ತಲಾ ಎರಡು ವಿಶ್ವಕಪ್ ಗೆದ್ದುಕೊಟ್ಟ ಸಾಧನೆಯನ್ನು ಮಾಡಿ ತಮ್ಮ ತಂಡವನ್ನು ಶ್ರೇಷ್ಠ ಮಟ್ಟಕ್ಕೇರಿಸಿದ್ದಾರೆ. ಆದರೆ ಇವರ ನಡುವೆ ಯಾರು ಶ್ರೇಷ್ಠರು ಎಂಬ ಪ್ರಶ್ನೆ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಹಲವು ದಿಗ್ಗಜ ಆಟಗಾರರು ಅವರವರ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ತರ್ಕ ಮಂಡಿಸುತ್ತಿದ್ದರು.

Leave a Reply

Your email address will not be published. Required fields are marked *