ಪಡುಪಣಂಬೂರು: ವೃದ್ಧೆಗೆ ಕೊರೊನಾ

ಮೂಲ್ಕಿ: ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಸದಿ ಬಳಿಯಲ್ಲಿ 71 ವರ್ಷದ ವಯೋವೃದ್ಧೆಗೆ ಶುಕ್ರವಾರ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಮನೆಯಲ್ಲಿ 78ರ ಹರೆಯದ ಪತಿಯೊಂದಿಗೆ ವಾಸಿಸುತ್ತಿರುವ ವೃದ್ಧೆಯ ಆರೋಗ್ಯದಲ್ಲಿ ಏರು ಪೇರಾದ ಕಾರಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಪತ್ತೆಯಾಗಿದೆ. ಮನೆಯ ಪ್ರದೇಶವನ್ನು ಪಡುಪಣಂಬುರು ಪಂ.ನ ಕಾರ್ಯದರ್ಶಿ ಲೋಕನಾಥ ಭಂಡಾರಿ ಹಾಗೂ ಗ್ರಾಮ ಲೆಕ್ಕಿಗ ಮೋಹನ್ ಹಾಗೂ ಆಶಾ ಕಾರ್ಯಕರ್ತರು ಭೇಟಿ ನೀಡಿ ಸೀಲ್ಡೌನ್ ಮಾಡಿ, ಕ್ರಮ ಕೈಗೊಳ್ಳಲಾಗಿದೆ.