ನೌಕರರಿಗೆ ಸೋಂಕು, ಗುಜರಾತ್ ಹೈಕೋರ್ಟ್ ಸೀಲ್ ಡೌನ್!

ಅಲಹಾಬಾದ್: ಗುಜರಾತ್ ಹೈ ಕೋರ್ಟ್‍ನಲ್ಲಿ ಕೆಲಸ ಮಾಡುವ ಆರು ಜನ ನೌಕರರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಹಿನ್ನೆಲೆ ಮೂರು ದಿನಗಳ ಕಾಲ ಹೈ ಕೋರ್ಟ್ ಮುಚ್ಚಲು ತೀರ್ಮಾನಿಸಲಾಗಿದೆ. ಆರು ಮಂದಿ ಕೋರ್ಟ್‍ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಕಾನ್ ಸ್ಟೇಬಲ್ ಗೆ ಸೋಂಕು ತಗುಲಿದೆ. ಇಂದಿನಿಂದ ಜುಲೈ 10ರವರೆಗೆ ಮೂರು ದಿನಗಳ ಕಾಲ ನ್ಯಾಯಾಲಯ ಆವರಣ ಮುಚ್ಚಲಾಗಿದ್ದು, ಔಷಧಿ ಸಿಂಪಡಣೆ ಮಾಡಲಾಗುತ್ತದೆ.
ಅಲಹಾಬಾದ್ ಪುರಸಭೆ ವತಿಯಿಂದ ಹೈ ಕೋರ್ಟ್ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಲಿದೆ. ಈ ವೇಳೆ ನ್ಯಾಯಾಲಯದ ಕಾರ್ಯವೈಖರಿ ಸ್ಥಗಿತಗೊಳ್ಳಲಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ. ಗುಜರಾತ್‍ನಲ್ಲಿ ಈವರೆಗೂ 37,636 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 26,744 ಜನರು ಗುಣಮುಖರಾಗಿದ್ದಾರೆ. ಹೆಚ್ಚು ಸೋಂಕು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ನಾಲ್ಕನೇ ಸ್ಥಾನದಲ್ಲಿದೆ.