ನೇತ್ರಾವತಿ ಸೇತುವೆ ಮೇಲೆ ಕೊಡೆಯಿಟ್ಟು ನದಿಗೆ ಹಾರಿದವನಿಗೆ ಶೋಧ!

ಉಳ್ಳಾಲ: ಜೆಪ್ಪಿನಮೊಗರು ನೇತ್ರಾವತಿ ಸೇತುವೆಯ ಮೇಲೆ ಕೊಡೆ ಇಟ್ಟು ವ್ಯಕ್ತಿಯೊಬ್ಬರು ನೀರಿಗೆ ಹಾರಿದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಉಳ್ಳಾಲದ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗಿದ್ದು ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಿದೆ. ಉಳ್ಳಾಲ ಠಾಣಾ ಪೊಲೀಸರು ಕೊರೋನಾ ಮಹಾಮಾರಿಯಿಂದಾಗಿ ಕ್ವಾರಂಟೈನ್ ನಲ್ಲಿದ್ದು ಸ್ಥಳಕ್ಕೆ ಪೊಲೀಸರು ಇನ್ನಷ್ಟೇ ಆಗಮಿಸಬೇಕಿದೆ.