ನೇತ್ರಾವತಿ ತಡೆಬೇಲಿ ಕಾಮಗಾರಿ ವೇಳೆ ಬೆಂಕಿ: ಅತೃಪ್ತ ಆತ್ಮಗಳ ಕುಚೇಷ್ಠೆ ವದಂತಿ

ಮಂಗಳೂರು: ನೇತ್ರಾವತಿ ಸೇತುವೆ ತಡೆಬೇಲಿ ಕಾಮಗಾರಿ ವೇಳೆ ಬೆಂಕಿ ಅನಾಹುತ ಸಂಭವಿಸಿ ಕೆಲಸಕ್ಕೆ ಅಡ್ಡಿಯಾಗಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಇದು ಇಲ್ಲಿ ಆತ್ಮಹತ್ಯೆಗೈದವರ ಪ್ರೇತಾತ್ಮಗಳ ಕುಚೇಷ್ಠೆ ಎಂದು ವದಂತಿ ಹಬ್ಬಿಸಿದ್ದಾರೆ.
ತಡೆಬೇಲಿ ನಿರ್ಮಿಸುವಾಗ ವೆಲ್ಡಿಂಗ್ ಮೆಷಿನ್ ನಲ್ಲಿ ಶಾಟ್೯ ಸಕ್ಯು ಟ್೯ ನಿಂದ ಬೆಂಕಿ ಆವರಿಸಿದ್ದು, ಸೇತುವೆ ಮೇಲೆ ಹಬ್ಬಿದ ದಟ್ಟ ಹೊಗೆ ಕಾಣಲಾರಂಭಿಸಿತ್ತು. ಇದರಿಂದ ವಾಹನ ಸವಾರರಲ್ಲಿ ಆತಂಕ ಮೂಡಿದೆ.
ಸ್ಥಳಕ್ಕೆ ಕಂಕನಾಡಿ ಪೊಲೀಸರ ಆಗಮಿಸಿ, ಬೆಂಕಿ ನಂದಿಸುವ ಕಾರ್ಯಕ್ಕೆ ಸಹಕರಿಸಿದ್ದಾರೆ.
ಕೆಲ ದಿನಗಳಿಂದ ಸೇತುವೆ ಮೇಲೆ ನಡೆಯುತ್ತಿರುವ ಆತ್ಮಹತ್ಯೆ ತಡೆಗೆ ಬೇಲಿ ಹಾಕುವ ಕಾಮಗಾರಿ ನಡೆಯುತ್ತಿದೆ. ಆ ಬಳಿಕ ಅಪಘಾತ ಒಂದು ನಡೆದು ಯುವಕನೋರ್ವ ಮೃತಪಟ್ಟಿದ್ದರೆ, ತಡೆಬೇಲಿಗೆ ಶಿಲನ್ಯಾಸ ನೆರವೇರಿಸಿದ ದಿನದಂದೇ ವ್ಯಕ್ತಿಯೋರ್ವ ಆತ್ಮಹತ್ಯೆ ನಡೆಸಿದ್ದ. ಅಲ್ಲದೆ ಸೇತುವೆ ಕಡೆಭಾಗದಲ್ಲಿರುವ ಮೂರು ಕಂಬಗಳಿರುವ ಮಧ್ಯೆ ನಿಂತಾಗ ನದಿ ನೀರಿಗೆ ಹಾರುವಂತಹ ಮನಸ್ಸಿನಲ್ಲಿ ಗೊಂದಲಗಳಾಗುತ್ತಿವೆ. ಇಲ್ಲಿ ನೂರಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಅತೃಪ್ತ ಆತ್ಮಗಳು ಇಲ್ಲಿ ಸುಳಿದಾಡುತ್ತಿದ್ದು, ಇವುಗಳಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಕೆಲವರು ಗಾಸಿಪ್ ಸೃಷ್ಟಿಸುತ್ತಿದ್ದಾರೆ.

Mandarabhail nalli ಮಂತ್ರ ತಂತ್ರ vashikara ಅಂತ ಹೇಳಿ ಜನರನ್ನು ಮೋಸ ಮಾಡುವ ಕೆಲಸ ನಡೆಯುತ್ತ ಇದೆ.. Vashikaran ಮಾಡಲು ಮದ್ದು ella ಮಾಡಿ ಕೊಟ್ಟು ಜನರನ್ನು ಮೋಸ ಮಾಡುವ ದಂಧೆ ನಡೆಯುತ್ತ ಇದೆ ಯಾರಾದರೂ ಇದನ್ನು ನಿಲ್ಲಿಸಿ… ತುಂಬಾ family ಗಳು halu ಆಗಿದೆ ಇವರಿಂದ… ಒಮ್ಮೆ ಹೋದರೆ ದೈವ ಭೂತ ಅಂತ story heli awarannu permanent ಗಿರಕಿ ಮಾಡಿ ಸುಲಿಗೆ ನಡೆಸುತ್ತಾ ಇದ್ದಾರೆ, ಪೂಜೆ galannu ಮಾಡಿಸಿ ಸುಲಿಗೆ ಮಾಡುತ್ತ ಇದ್ದಾರೆ ಬಡವರ nu hedarisi plz yaradru idanu stop ಮಾಡಿ ದೇವರ ಹೆಸರಲ್ಲಿ ನಡೆವ bevarsi ಚಟುವಟಿಕೆ galannu ನಿಲ್ಲಿಸಿ
Mangalore na yeyyadi ಸಮೀಪ da ಮಂದಾರ bail ಎಂಬಲ್ಲಿ ದೇವರ ಹೆಸರ lli ನಡೆಯುವ ಅಕ್ರಮ ನಿಲ್ಲಿಸಿ
Aati samayadalli aagiraluu sadhyavide!