ನಾಲ್ವರು ನಕ್ಸಲರ ಎನ್ ಕೌಂಟರ್

ಪಾಟ್ನಾ: ಬಿಹಾರದ ಪಶ್ಚಿಮ ಚಂಪರಣ್ ಜಿಲ್ಲೆಯಲ್ಲಿ ಇಂದು ಪೊಲೀಸ್ ಎನ್‍ಕೌಂಟರ್‍ನಲ್ಲಿ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ. ಸ್ಪೆಷಲ್ ಟಾಸ್ಕ್‍ಫೋರ್ಸ್ ಸಿಬ್ಬಂದಿ ನಕ್ಸಲರ ಅಡಗುತಾಣಗಳ ಬಗ್ಗೆ ಮಾಹಿತಿ ಪಡೆದು ದಾಳಿ ಕಾರ್ಯಾಚರಣೆ ನಡೆಸಿದ್ದಾರೆ. ಎನ್ ಕೌಂಟರ್ ಕುರಿತು ಎಸ್‍ಎಸ್‍ಬಿ ಐಜಿ ಸಂಜಯಕುಮಾರ್ ಮಾಹಿತಿ ನೀಡಿದ್ದು ಸಾವನ್ನಪ್ಪಿದ ನಕ್ಸಲರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ನಕ್ಸಲರಿಂದ ಎಕೆ 56, ಸೆಲ್ಫ್ ಲೋಡಿಂಗ್ ರೈಫಲ್‍ಗಳಿದ್ದವು. ವಾಲ್ಮೀಕಿನಗರದ ಕಾಡಿನಲ್ಲಿ ಎನ್‍ಕೌಂಟರ್ ನಡೆದಿದ್ದು ಉಳಿದ ನಕ್ಸಲರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *