ನಾಪತ್ತೆಯಾದ ಮಹಿಳೆ ಶವವಾಗಿ ಬಾವಿಯಲ್ಲಿ ಪತ್ತೆ

ಕುಪ್ಪೆಪದವು: ಸೋಮವಾರದಿಂದ ನಾಪತ್ತೆಯಾಗಿದ್ದ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಬಡಗ ಉಳಿಪಾಡಿ ಗ್ರಾಮದ ಕೊಲ್ಲಬೆಟ್ಟು ನಿವಾಸಿ ಆಶಾಲತಾ(36) ಎಂಬವರು ನಿನ್ನೆ ಸಂಜೆ ಇಲ್ಲಿನ ಪಾಪೆಮಾರ್ ಎಂಬಲ್ಲಿನ ಮನೆಯೊಂದರ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಆದಿತ್ಯವಾರ ರಾತ್ರಿ ಊಟ ಮಾಡಿ ಮಲಗಿದ್ದವರು ಸೋಮವಾರ ಮುಂಜಾನೆ 5:30 ರ ಸುಮಾರಿಗೆ ಮನೆಯಿಂದ ತೆರಳಿದವರು ನಿಗೂಢ ನಾಪತ್ತೆಯಾಗಿದ್ದರು. ಇವರಿಗಾಗಿ ಎರಡು ದಿನಗಳ ಕಾಲ ಸಾಕಷ್ಟು ಕಡೆಗಳಲ್ಲಿ ಹುಟುಕಾಟ ನಡೆಸಲಾಗಿತ್ತು. ಇವರ ಪತ್ತೆಗಾಗಿ ವಾಟ್ಸಾಪ್ ಸಂದೇಶ ರವಾಣಿಸಲಾಗಿತ್ತು. ಆದರೆ ನಿನ್ನೆ ಸಂಜೆ ಪಾಪೆಮಾರ್‍ನ ಮಹಿಳೆಯೊಬ್ಬರು ಬಾವಿಯಿಂದ ನೀರು ತೆಗೆಯಲು ಹೋದಾಗ ಅದರಲ್ಲಿ ಆಶಾಲತ ಅವರ ಶವ ಪತ್ತೆಯಾಗಿದೆ. .ಇವರ ಇಬ್ಬರು ಮಕ್ಕಳಲ್ಲಿ ಕೆಲ ಸಮಯದ ಹಿಂದೆ ಮಗುವೊಂದು ಅನಾರೋಗ್ಯ ದಿಂದ ಮೃತಪಟ್ಟಿದ್ದು ಇದರಿಂದ ಆಶಾಲತಾ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಸಂಬಂಧಿಕರ ಮನೆಗಳಲ್ಲಿ ಸಹಿತ ಹಲವು ಕಡೆಗಳಲ್ಲಿ ವಿಚಾರಿಸಿದಾಗ ಪತ್ತೆಯಾಗದ ಹಿನ್ನೆಲೆಯಲ್ಲಿ ಆಶಾಲತಾ ಅವರ ಪತಿ ರಮಾನಾಥ್ ಮೂಲ್ಯ ಅವರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  

Leave a Reply

Your email address will not be published. Required fields are marked *