ನಾಗರಪಂಚಮಿ ಆಚರಣೆ ಮಾಡುವಂತಿಲ್ಲ: ಉಡುಪಿ ಡಿಸಿ ಆದೇಶ

ಮಲ್ಪೆ: ಈ ಬಾರಿ ಜಿಲ್ಲೆಯಲ್ಲಿ ಎಲ್ಲೂ ಸಾಮೂಹಿಕವಾಗಿ ನಾಗರಪಂಚಮಿ ಆಚರಣೆ ಮಾಡುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ನೀಡಿದ್ದಾರೆ.
ತುಳುನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ನಾಗರಪಂಚಮಿ ಹಬ್ಬಕ್ಕೆ ಅದರದ್ದೇ ಆದ ಮಹತ್ವವಿದೆ. ಹಿಂದೂ ಬಾಂಧವರು ಒಂದೆಡೆ ಸೇರಿ ಆಚರಣೆ ಮಾಡುವ ಹಬ್ಬಗಳಲ್ಲಿ ನಾಗರಪಂಚಮಿ ಹಬ್ಬಕ್ಕೆ ತುಳುನಾಡಿನಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಹಬ್ಬಗಳ ಆಚರಣೆಗೆ ಪೆಟ್ಟು ಬಿದ್ದಿದೆ.
ಜುಲೈ 25ರಂದು ನಾಗರಪಂಚಮಿ ಹಬ್ಬವಿದ್ದು ಒಂದು ವೇಳೆ ಅವಕಾಶ ಕೊಟ್ಟರೆ ಕೊರೋನಾ ಸೋಂಕು ಮತ್ತಷ್ಟು ಹೆಚ್ಚುವ ಭೀತಿಯಿದೆ. ಹೀಗಾಗಿ ಅವಕಾಶ ನೀಡದಿರಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ.
ಶ್ರಾವಣ ಮಾಸದ ಯಾವುದೇ ಹಬ್ಬ, ಆಚರಣೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಹೇಳಿದ್ದಾರೆ.
Tell that D C he is good for nothing.
Seal down he has announced,
We HV to go to work.
But no transportation us there.
Has he lost his senses .
Highly impossible to travel by auto daily.
Useless fellow no common sense.
Creating problems for common men.
Ok
Very informative