ನಗ್ನಚಿತ್ರ ಪ್ರಕರಣ: ರೆಹನಾ ಫಾತಿಮಾ ಜಾಮೀನು ತಿರಸ್ಕಾರ

ಕೊಚ್ಚಿನ್: ತನ್ನ ಮಕ್ಕಳಿಂದ ದೇಹದ ಮೇಲೆ ನಗ್ನಚಿತ್ರ ರಚಿಸಿಕೊಂಡಿದ್ದ ರೆಹನಾ ಫಾತಿಮಾ ಜಾಮೀನು ಅರ್ಜಿಯನ್ನು ಕೇರಳ ಹೈ ಕೋರ್ಟ್ ತಿರಸ್ಕರಿಸಿದೆ. ರೆಹನಾ ಕೆಲದಿನಗಳ ಹಿಂದೆ ಅರೆನಗ್ನವಾಗಿ ಮಲಗಿ ಇಬ್ಬರು ಮಕ್ಕಳಿಂದ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕೇರಳ ಪೆÇಲೀಸರು ಪೆÇೀಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಕೋರ್ಟ್ ಮೊರೆ ಹೋಗಿದ್ದ ರೆಹಾನಾ ಫಾತಿಮಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆಯನ್ನು ನಡೆಸಿದ ಕೇರಳ ಹೈಕೋರ್ಟ್ ವಜಾಗೊಳಿಸಿದೆ. ರೆಹನಾ ಫಾತಿಮಾ ಕಳೆದ ವರ್ಷ ಶಬರಿಮಲೆ ಸನ್ನಿಧಾನಕ್ಕೆ ತೆರಳಲು ಯತ್ನಿಸಿ ಬಂಧನಕ್ಕೆ ಒಳಗಾಗಿದ್ದರು. ಕೇರಳದ ಬಿಎಸ್ಸೆನ್ನೆಲ್ ಉದ್ಯೋಗಿಯಾಗಿದ್ದ ರೆಹನಾರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.