ಧರ್ಮಸ್ಥಳ: ಅಕ್ರಮ ಗೋಸಾಗಾಟ ತಡೆದ ಭಜರಂಗದಳ!

ಮಂಗಳೂರು: ಬೆಳ್ತಂಗಡಿ ಬಜರಂಗದಳ ಕಾರ್ಯಕರ್ತರು ಇಂದು ನಸುಕಿನ ಜಾವ ನಡೆಸಿದ ಕಾರ್ಯಾಚರಣೆಯಲ್ಲಿ ಈಚರ್ ವಾಹನದಲ್ಲಿ ಅಕ್ರಮ ಗೋಸಾಗಾಟ ಪತ್ತೆಹಚ್ಚಿದ್ದಾರೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯಲ್ಲಿ ಭಜರಂಗದಳದ ಕಾರ್ಯಕರ್ತರು ಅಕ್ರಮ ಗೋವು ಸಾಗಾಟದ ವಾಹನವನ್ನು ನಿಲ್ಲಿಸಿ ಪೋಲೀಸರಿಗೆ ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಬೆಳ್ತಂಗಡಿ ಎಸ್ ಐ ನಂದಕುಮಾರ್ ಸರ್ ಹಾಗೂ ಧರ್ಮಸ್ಥಳ ಎಸ್ ಐ ಪವನ್ ಕುಮಾರ್ ಧಾವಿಸಿ ಅಕ್ರಮ ಗೋ ಸಾಗಾಟಗಾರರನ್ನು ಬಂಧಿಸಿ 9 ಗೋವುಗಳ ಸಮೇತ ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ.

Leave a Reply

Your email address will not be published. Required fields are marked *