ದ.ಕ 147, ಉಡುಪಿ 45, ಕಾಸರಗೋಡು‌ 28 ಮಂದಿಗೆ ಕೊರೊನಾ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು 147 ಮಂದಿಗೆ ಕೊರೊನಾ ದೃಢವಾಗಿದೆ. ಒಟ್ಟು 10 ಮಂದಿ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 38 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
38 ಮಂದಿ ಪ್ರಾಥಮಿಕ ಸಂಪರ್ಕದಿಂದ, 40 ILI, 2 SARI, 8 ವಿದೇಶ, 7 ಹೊರರಾಜ್ಯ‌, 48 ರ‌್ಯಾಂಡಮ್ ಟೆಸ್ಟ್‌ ಸೇರಿ 147 ಮಂದಿ ಸೋಂಕಿತರ ಪತ್ತೆಯಾಗಿದೆ.

ಉಡುಪಿ: ಜಿಲ್ಲೆಯಲ್ಲಿ ಮತ್ತೆ 45 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ನಡುವೆ 22 ಮಂದಿ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1322ಕ್ಕೆ ಏರಿಕೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 1136 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ 183 ಸಕ್ರಿಯ ಪ್ರಕರಣಗಳಿವೆ. ರವಿವಾರದಂದು ಜಿಲ್ಲೆಯಲ್ಲಿ 518 ಮಂದಿಯ ವರದಿ ನೆಗೆಟಿವ್ ಬಂದಿದೆ.

ಕಾಸರಗೋಡು: ಇಲ್ಲಿ 28 ಮಂದಿಗೆ ಕೊರೊನಾ ದೃಢವಾಗಿದೆ 120 ಸಕ್ರಿಯ ಪ್ರಕರಣಗಳಿವೆ

Leave a Reply

Your email address will not be published. Required fields are marked *