ದ.ಕ.ದಲ್ಲಿ ಕೊರೊನಾಗೆ ಮತ್ತೊಂದು ಬಲಿ: ಒಂದೇ ದಿನ ಮೂವರು ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಒಂದೇ ದಿನ ಸಾವಿನ ಸಂಖ್ಯೆ ಮೂರಕ್ಕೇರಿದೆ. ಇಂದು ಸಂಜೆ ಮೃತಪಟ್ಟವರನ್ನು ಭಟ್ಕಳ ನಿವಾಸಿ 79 ವರ್ಷದ ವೃದ್ಧ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಬೆಂಗ್ರೆಯ 51 ವರ್ಷದ ಗಂಡಸು ಹಾಗೂ ಭಟ್ಕಳದ 31 ವರ್ಷದ ಯುವಕ ಮೃತಪಟ್ಟಿದ್ದರು. ಆದರೆ ಇಂದು ಸಂಜೆ ಭಟ್ಕಳದ 79 ವರ್ಷದ ವೃದ್ಧ ಮೃತಪಟ್ಟು, ಒಂದೇ ದಿನ ಮೂವರು ಮೃತಪಟ್ಟಂತಾಗಿದೆ. ದ.ಕ. ಜಿಲ್ಲೆಯಲ್ಲಿ ಇಂದು 84 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

Leave a Reply

Your email address will not be published. Required fields are marked *