ದ.ಕ ಜಿಲ್ಲೆಯ ಜನರಿಗೆ ಉಚಿತ ಕೊರೋನಾ ಚಿಕಿತ್ಸೆ..!

ಮಂಗಳೂರು: ಆಧಾರ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಕೊರೋನಾದ ತಪಾಸಣೆ ಇರಲಿ ಆಥವ ಚಿಕಿತ್ಸೆ ಇರಲಿ ಎಲ್ಲದಕ್ಕೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಎಪಿಎಲ್ ಕಾರ್ಡ್ ಇರಲಿ ಬಿಪಿಎಲ್ ಕಾರ್ಡ್ ಇರಲಿ ಆಥವ ಯಾವುದೇ ಆರೋಗ್ಯ ಕಾರ್ಡ್ ಇದಾವುದೂ ಬೇಕಾಗಿಲ್ಲ. ಕೇವಲ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ. ದ.ಕ. ಜಿಲ್ಲೆಯ ಎಲ್ಲ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕೊರೋನಾ ಉಚಿತ ಚಿಕಿತ್ಸೆ ಲಭ್ಯವಿರಲಿದೆ. ದೇರಳಕಟ್ಟೆ ಕೆ. ಎಸ್ ಹೆಗ್ಡೆ ಮೆಡಿಕಲ್ ಕಾಲೇಜ್, ಯೆನಪೋಯ ದೇರಳಕಟ್ಟೆ, ಕಣಚೂರ್ ಆಸ್ಪತ್ರೆ ದೇರಳಕಟ್ಟೆ, ಫಾದರ್ ಮುಲ್ಲರ್ ಆಸ್ಪತ್ರೆ ದೇರಳಕಟ್ಟೆ, ಕೆಎಂಸಿ ಅತ್ತಾವರ್, ಎಜೆ ಆಸ್ಪತ್ರೆ, ಶ್ರೀನಿವಾಸ್ ಆಸ್ಪತ್ರೆ ಮುಕ್ಕ, ಕೆವಿಜಿ ಆಸ್ಪತ್ರೆ ಸುಳ್ಯ ಇಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ದೊರೆಯಲಿದೆ.

Leave a Reply

Your email address will not be published. Required fields are marked *