ದ.ಕ. ಜಿಲ್ಲೆಯಲ್ಲಿ ಪೊಲೀಸ್ ನಾಕಾಬಂದಿ!

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಲಾಕ್ ಡೌನ್ ಅಧಿಕೃತವಾಗಿ ಜಾರಿಯಾಗಿದೆ. ಜುಲೈ 23 ರ ಬೆಳಗ್ಗೆ 5 ಗಂಟೆಯವರೆಗೆ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈಗಾಗಲೇ ಜಿಲ್ಲಾಡಳಿತ ಲಾಕ್ ಡೌನ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ದಿನಸಿ, ಹಣ್ಣು,ತರಕಾರಿ ಮಾಂಸದ ಅಂಗಡಿಗಳು ಓಪನ್ ಇರಲಿದ್ದು, ಜನರು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಆದ್ರೆ ಜಿಲ್ಲಾಡಳಿತ ಈ ಅವಕಾಶ ನೀಡಿದ್ದರೂ ಮಾರ್ಕೆಟ್ ಗಳತ್ತ ಜನ ಇಂದು ಸುಳಿಯಲಿಲ್ಲ. ಮಂಗಳೂರಿನ ಎಲ್ಲಾ ಮಾರ್ಕೆಟ್ ಗಳು ಖಾಲಿ ಖಾಲಿಯಾಗಿದ್ದವು. ಗ್ರಾಹಕರಿಗಾಗಿ ವ್ಯಾಪಾರಸ್ಥರು ಕಾಯುತ್ತಿರುವ ದೃಶ್ಯಗಳು ಕಂಡುಬಂತು. ಮಂಗಳೂರಿನ ರಸ್ತೆಗಳಲ್ಲೂ ವಾಹನ ಸಂಖ್ಯೆ ವಿರಳವಾಗುತ್ತು. ಪೊಲೀಸರು ಮಂಗಳೂರಿನ ವಿವಿಧೆಡೆ ನಾಕಾಬಂದಿ ನಡೆಸುತ್ತಿದ್ದಾರೆ.

1 thought on “ದ.ಕ. ಜಿಲ್ಲೆಯಲ್ಲಿ ಪೊಲೀಸ್ ನಾಕಾಬಂದಿ!

Leave a Reply

Your email address will not be published. Required fields are marked *