ದ.ಕ. ಜಿಲ್ಲೆಯಲ್ಲಿ ನಾಳೆ ಲಾಕ್ಡೌನ್ ವಿನಾಯಿತಿ ಇಲ್ಲ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಎಂದಿನ ಭಾನುವಾರದಂತೆ ಪೂರ್ತಿ ದಿನ ಕರ್ಫ್ಯೂ ಜಾರಿಯಿರಲಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ ಜಾರಿಯಿದ್ದು ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಹಣ್ಣು, ತರಕಾರಿ, ಮೆಡಿಕಲ್ ಆರೋಗ್ಯ ಸೇವೆ ಸೇರಿದಂತೆ ಅವಶ್ಯಕ ವಸ್ತು ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇಂದು 11 ಗಂಟೆಯಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ಸಂಪೂರ್ಣ ಬಂದ್ ಇರಲಿದ್ದು ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.

Leave a Reply

Your email address will not be published. Required fields are marked *